ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

1726773741454_DVG-GANESH-GALATE-2.jpg
Published on

ದಾವಣಗೆರೆ : ಪೊಲೀಸ್ ಸಿಬ್ಬಂದಿಗೆ ಗಾಯ  ದಾವಣಗೆರೆಯಲ್ಲಿ ಬಿಗುವಿನ ವಾತಾವರಣ  ವಿಜಯವಾಣಿ ಸುದ್ದಿಜಾಲ ದಾವಣಗೆರೆ  ನಗರದ ಅರಳಿಮರ ವೃತ್ತದ ಸಮೀಪ ಗುರುವಾರ ಸಂಜೆ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದ್ದು ಒಬ್ಬ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.  ಬೇತೂರು ರಸ್ತೆಯ ಸಿದ್ದರಾಮೇಶ್ವರ ಬಡಾವಣೆಯ ಗಣೇಶನ ವಿಸರ್ಜನೆ ಮೆರವಣಿಗೆ ವೆಂಕಟೇಶ್ವರ ವೃತ್ತದ ಮೂಲಕ ಅರಳಿಮರ ಸರ್ಕಲ್ ಬಳಿ ಬರುತ್ತಿದ್ದಂತೆ ಎರಡು ಗುಂಪುಗಳು ಜಮಾವಣೆಯಾಗಿ ಬಿಗುವಿನ ವಾತಾವರಣ ಉಂಟಾಯಿತು.  ಒಂದು ಕೋಮಿನವರು ಘೋಷಣೆ ಕೂಗಿದ್ದಕ್ಕೆ ಪ್ರತಿಯಾಗಿ ಇನ್ನೊಂದು ಕೋಮಿನವರೂ ಘೋಷಣೆ ಹಾಕಿದರು. ಆಗ ಒಬ್ಬ ಪೊಲೀಸ್‌ಗೆ ಕಲ್ಲೇಟು ಬಿದ್ದಿತು. ಅಲ್ಲಿಂದ ಚಾಮರಾಜ ಪೇಟೆ ಸರ್ಕಲ್ ಕಡೆಗೆ ಹೋಗುವಾಗ ಜಗಳೂರು ಬಸ್ ನಿಲ್ದಾಣದ ಬಳಿ ಬರುತ್ತಿದ್ದಂತೆ ಮತ್ತೆ ಕಲ್ಲು ತೂರಾಟ ನಡೆಯಿತು.  ಪರಿಸ್ಥಿತಿ ಕೈಮೀರುವ ಲಕ್ಷಣಗಳು ಕಂಡಾಗ ಪೊಲೀಸರು ಡಿಜೆ ಬಂದ್ ಮಾಡಿಸಿ ಗುಂಪನ್ನು ಚದುರಿಸಿ ಗಣೇಶ ಮೂರ್ತಿಯನ್ನು ವಿಸರ್ಜನೆಗೆ ಕಳಿಸಿಕೊಟ್ಟರು. ಕಲ್ಲು ತೂರಾಟದಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ರಘು ಅವರಿಗೆ ಕಲ್ಲೇಟು ಬಿದ್ದಿದೆ. ಸಾರ್ವಜನಿಕರು ಗಾಯಗೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.  ಘಟನೆ ಹಿನ್ನೆಲೆಯಲ್ಲಿ ಎಸ್ಪಿ ಉಮಾ ಪ್ರಶಾಂತ್, ಹೆಚ್ಚುವರಿ ಎಸ್ಪಿಗಳು, ಡಿವೈಎಸ್ಪಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ವಾಹನಗಳಿಗೆ ಸೈರನ್ ಹಾಕಿಕೊಂಡು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗಸ್ತು ಮಾಡಿದರು. ಅಂಗಡಿ, ಮುಂಗಟ್ಟುಗಳನ್ನು ಮುಚ್ಚಿಸಲಾಯಿತು.  ...    ಹಿನ್ನೆಲೆ  ಬುಧವಾರ ಒಂದು ಕೋಮಿನ ಮುಖಂಡರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾಕಾರಿ ಹೇಳಿಕೆ ನೀಡಿದ್ದು ಅದಕ್ಕೆ ಪ್ರತಿಯಾಗಿ ಇನ್ನೊಂದು ಕೋಮಿನವರೂ ಪ್ರಚೋದನಾಕಾರಿ ಹೇಳಿಕೆಯನ್ನು ಪೋಸ್ಟ್ ಮಾಡಿದ್ದರು. ಈ ಹೇಳಿಕೆಗಳೇ ಪರಿಸ್ಥಿತಿ ಕೈಮೀರಲು ಕಾರಣವಾದವು ಎಂದು ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net