ಅಂಚೆ-ಕುಂಚ ಸ್ಪರ್ಧೆ ಫಲಿತಾಂಶ

DVG-GANESHA-13-A.jpg
Published on

ದಾವಣಗೆರೆ: ನಗರದ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಶ್ರೀ ಗಣೇಶೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ಅಂಚೆ ಕಾರ್ಡಿನಲ್ಲಿ ಗಣಪತಿ ಚಿತ್ರ ಬರೆಯುವ ರಾಜ್ಯಮಟ್ಟದ ಅಂಚೆ-ಕುಂಚ ಸ್ಪರ್ಧೆ ಫಲಿತಾಂಶ ಪ್ರಕಟಿಸಲಾಗಿದೆ.
 ಪ್ರಾಥಮಿಕ ವಿಭಾಗದಲ್ಲಿ ಉತ್ತರ ಕನ್ನಡ ಜಿಲ್ಲೆ ಗೋಕರ್ಣದ ನಾರಾಯಣ ಪೈ ಪ್ರಥಮ, ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ಎ. ಪ್ರಚೇತ್ ಪೈ ದ್ವಿತೀಯ, ಶಿವಮೊಗ್ಗ ಜಿಲ್ಲೆಯ ಜ್ಯೋತಿ ನಗರದ ಡಿ. ಹರ್ಷಿತಾ ತೃತೀಯ ಬಹುಮಾನ ಪಡೆದಿದ್ದಾರೆ.
 ಕಿರಿಯರ ವಿಭಾಗದಲ್ಲಿ ಬೆಂಗಳೂರಿನ ನವ್ಯ ಮನೋಹರ ಪೈ ಪ್ರಥಮ, ಮಂಡ್ಯ ಜಿಲ್ಲೆ ಹೊನ್ನಾಯಕನಳ್ಳಿಯ ಎಚ್.ವಿ. ವಿಷ್ಣುಪ್ರಸಾದ್, ದಾವಣಗೆರೆಯ ಎಲ್. ಸಿರಾಲಿ, ಶಿವಮೊಗ್ಗ ಜಿಲ್ಲೆ ಕಾಚಿನಕಟ್ಟೆಯ ಟಿ. ನವ್ಯಾ ದ್ವಿತೀಯ, ಉತ್ತರ ಕನ್ನಡ ಜಿಲ್ಲೆಯ  ಭಟ್ಕಳದ ಸಮರ್ಥ ಮೂನಕಾಮೆ ತೃತೀಯ ಬಹುಮಾನ ಗಳಿಸಿದ್ದಾರೆ.
 ಹಿರಿಯರ ವಿಭಾಗದಲ್ಲಿ ಶಿವಮೊಗ್ಗ ಜಿಲ್ಲೆ ಆರಗದ ಅಮೃತ ನೂತನ್, ದಕ್ಷಿಣ ಕನ್ನಡ ಜಿಲ್ಲೆ ಕುದ್ರೋಳಿಯ ರಾಜೇಶ್ ಡಿ. ಶೇಟ್ ಪ್ರಥಮ, ದಾವಣಗೆರೆಯ ಎಸ್.ವಿ. ಛಾಯಾ ದ್ವಿತೀಯ, ಉತ್ತರ ಕನ್ನಡ ಜಿಲ್ಲೆ ಭಟ್ಕಳದ ಬಿ. ಲೋಹಿತಾಶ್ವ ತೃತೀಯ ಬಹುಮಾನ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net