ಫುಡ್ ಕೋರ್ಟ್ ಕಾಮಗಾರಿಗೆ ಚಾಲನೆ ನೀಡಿದ ಸಚಿವ

DVG-FOOD-COURT.jpg
Published on

ದಾವಣಗೆರೆ: ನಗರದ ಮೋದಿ ವೃತ್ತದ ಬಳಿ ಇರುವ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪ ಪಕ್ಕದ ಸಿಸಿ ರಸ್ತೆ ಹಾಗೂ ಫುಡ್ ಕೋರ್ಟ್ ನಿರ್ಮಾಣಕ್ಕೆ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಭೂಮಿ ಪೂಜೆ ನೆರವೇರಿಸಿದರು.
 ಫುಡ್‌ಕೋರ್ಟ್ ಪೂರ್ಣಗೊಂಡ ನಂತರ ವ್ಯಾಪಾರಸ್ಥರು ಸ್ವಚ್ಛತೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಗ್ರಾಹಕರಿಗೆ ಉತ್ತಮವಾದ ಉಪಾಹಾರ ನೀಡಬೇಕು ಎಂದ ಅವರು, ಕಾಮಗಾರಿ ಸ್ಥಗಿತಗೊಳ್ಳದೇ ತುರ್ತಾಗಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
 ಕರವೇ ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ ಮಾತನಾಡಿ, ಬೀದಿ ಬದಿಯ ವ್ಯಾಪಾರಸ್ಥರ ಫುಡ್ ಕೋರ್ಟ್ ವ್ಯವಸ್ಥೆ ಮಾಡಿಸುವ ಸಲುವಾಗಿ ಕಳೆದ 20 ವರ್ಷಗಳಿಂದ ಕರವೇ ಹೋರಾಟ ನಡೆಸುತ್ತಲೆ ಬಂದಿದೆ. ಆದರೆ, ಇಂದು ಜಿಲ್ಲಾ ಉಸ್ತುವಾರಿ ಸಚಿವರು ನೀಡಿದ ಭರವಸೆಯಂತೆ ಕಾಮಗಾರಿ ಚಾಲನೆ ನೀಡಿರುವುದು ಸಂತಸವಾಗಿದೆ ಎಂದು ಹೇಳಿದರು.
  ಪಾಲಿಕೆ ಆಯುಕ್ತೆ ರೇಣುಕಾ, ಗುತ್ತಿಗೆದಾರ ಗಣೇಶ್, ಎಇಇ ನವೀನ್, ಉಪಾಧ್ಯಕ್ಷ ಜಿ.ಎಸ್. ಸಂತೋಷ್, ಪಾಲಿಕೆ ಸದಸ್ಯ ಪಾಮೇನಹಳ್ಳಿ ನಾಗರಾಜ್, ವಾರ್ಡಿನ ಸದಸ್ಯ ಗುಡಾಳ್ ಮಂಜುನಾಥ್, ಕರವೇ ಪಾದಚಾರಿ ವ್ಯಾಪಾರಿ ಘಟಕದ ಅಧ್ಯಕ್ಷ ಸುರೇಶ್, ರಾಘವೇಂದ್ರ, ಚಂದ್ರು, ಮಂಜುನಾಥ್, ಸಾಗರ್, ರಮೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net