

ದಾವಣಗೆರೆ : ಫುಡ್ ಕೋರ್ಟ್‌ನಲ್ಲಿ ಸಾರ್ವಜನಿಕರಿಗೆ ನೀಡುವ ಆಹಾರ ಉತ್ತಮ ಗುಣಮಟ್ಟದಿಂದ ಕೂಡಿರಬೇಕು. ಸ್ವಚ್ಛತೆಯ ಬಗ್ಗೆ ಗಮನ ಹರಿಸಬೇಕು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಸೂಚನೆ ನೀಡಿದರು. ನಗರದ ಡಾ.ಎಂ.ಸಿ. ಮೋದಿ ವೃತ್ತದ ಬಳಿ ಕರ್ನಾಟಕ ರಕ್ಷಣಾ ವೇದಿಕೆಯ ಪಾದಚಾರಿ ವ್ಯಾಪಾರಿಗಳು, ನಗರ ಘಟಕದಿಂದ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಸವಿ ಭೋಜನ’ ಫುಡ್ ಕೋರ್ಟ್ ಉದ್ಘಾಟಿಸಿ ಮಾತನಾಡಿದರು. ಇತ್ತೀಚೆಗಷ್ಟೇ ಫುಡ್ ಕೋರ್ಟ್ ಮತ್ತು ಸಿಸಿ ರಸ್ತೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಗುದ್ದಲಿ ಪೂಜೆ ಮಾಡಿದ್ದರು. ಈಗ ನಾನು ಫುಡ್ ಕೋರ್ಟ್ ಉದ್ಘಾಟನೆ ಮಾಡುತ್ತಿರುವುದು ಸಂತೋಷ ತಂದಿದೆ. ನಮ್ಮ ಸರ್ಕಾರ ಬಡವರ ಪರವಾಗಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದು ತಿಳಿಸಿದರು. ಈ ಜಾಗದಲ್ಲಿ ಇನ್ನೂ ಅನೇಕ ಮೂಲ ಸೌಕರ್ಯಗಳು ಆಗಬೇಕಾಗಿದೆ. ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆ ಕಲ್ಪಿಸಿ ಕೊಡಬೇಕು. ಮಳೆ ನೀರು ಬಾರದಂತೆ ಫುಡ್ ಕೋರ್ಟಿಗೆ ಶೆಲ್ಟರ್ ಹೊದಿಕೆ ಮಾಡಿಸಬೇಕೆಂದು ಮಹಾನಗರ ಪಾಲಿಕೆ ಆಯುಕ್ತರಿಗೆ ಸೂಚಿಸಿದರು. ಕಾಮಗಾರಿಯು ಗುಣಮಟ್ಟದಿಂದ ಕೂಡಿರಬೇಕು, ಈ ವಿಷಯದಲ್ಲಿ ರಾಜಿ ಆಗುವುದಿಲ್ಲ ಎಂದು ಎಚ್ಚರಿಸಿದರು. ಪಾಲಿಕೆ ಆಯುಕ್ತೆ ರೇಣುಕಾ ಮಾತನಾಡಿ, ಈಗಾಗಲೇ ಫುಡ್ ಕೋರ್ಟ್ ಮಾಡಲು ಟೆಂಡರ್ ಕರೆದು ಹಣ ಬಿಡುಗಡೆ ಮಾಡಿದ್ದೇವೆ. ಗುತ್ತಿಗೆದಾರರು ಎಲ್ಲ ಕೆಲಸಗಳನ್ನು ತ್ವರಿತ ಗತಿಯಲ್ಲಿ ಮುಗಿಸಬೇಕು. ಡಾ.ಎಂ.ಸಿ. ಮೋದಿ ವೃತ್ತ, ಎಸ್‌ಒಜಿ ಕಾಲನಿ, ಜಯದೇವ ವೃತ್ತದಲ್ಲಿ ಶೇ. 80ರಷ್ಟು ಕೆಲಸ ಮುಗಿದಿದೆ. ಗಡಿಯಾರ ಕಂಬ ಹತ್ತಿರ ಕೆಲಸ ಪ್ರಾರಂಭ ಮಾಡಬೇಕಾಗಿದೆ ಎಂದು ತಿಳಿಸಿದರು. ಪಾಲಿಕೆ ಸದಸ್ಯರಾದ ಗಡಿಗುಡಾಳು ಮಂಜುನಾಥ್, ಪಾಮೇನಹಳ್ಳಿ ನಾಗರಾಜ್, ಉಮೇಶ್, ಚಮನ್ ಸಾಬ್, ಎ.ನಾಗರಾಜ್ ಮಾತನಾಡಿದರು. ಕರವೇ ಜಿಲ್ಲಾ ಗೌರವಾಧ್ಯಕ್ಷ ವಾಸುದೇವ ರಾಯ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕರವೇ ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪಾದಚಾರಿ ವ್ಯಾಪಾರಿಗಳ ಘಟಕದ ಅಧ್ಯಕ್ಷ ಸುರೇಶ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಬಸಮ್ಮ, ಶಾಂತಮ್ಮ, ನಾಗಮ್ಮ, ಮಂಜುಳಾ ಗಣೇಶ್, ಉದ್ದಿಮೆದಾರರ ಘಟಕ ಉಪಾಧ್ಯಕ್ಷ ಒ. ಮಹೇಶ್ವರಪ್ಪ, ಬಿ.ಎಸ್. ಸಂತೋಷ್, ರಾಜಣ್ಣ, ರವಿಕುಮಾರ್, ಜಬಿವುಲ್ಲಾ, ಆಟೋ ರಫೀಕ್, ಅಯೂಬ್ ಅನ್ವರ್, ದಾದಾಪೀರ್, ಎಂ.ಡಿ. ರಫೀಕ್, ದಾದೇಶ್, ಧೀರೇಂದ್ರ, ರಾಘವೇಂದ್ರ, ಚಂದ್ರು, ತುಳಸಿರಾಮ, ಸಂಜು, ಕರಿಬಸಪ್ಪ, ರಮೇಶ್, ರಾಕಿ, ಅಕ್ಷಯ್, ಹನುಮಂತಪ್ಪ, ಬಸವರಾಜ್, ದಾದಾಪೀರ್, ನಾಗರಾಜ್, ರವಿ, ಮಂಜುನಾಥ್, ನಾಗಪ್ಪ ಇದ್ದರು.