ಪ್ರವಾಹದಿಂದ ರಸ್ತೆ ಸಂಪರ್ಕ ಕಡಿತ

dvg-rain-17.jpg
Published on

ದಾವಣಗೆರೆ : ಜಿಲ್ಲೆಯಲ್ಲಿ ತುಂಗಭದ್ರಾ ನದಿಯ ನೀರಿನ ಮಟ್ಟ ಏರಿಕೆಯಾಗಿ ಹರಿಹರ ತಾಲೂಕಿನ ಉಕ್ಕಡಗಾತ್ರಿ ಮತ್ತು ಫತ್ಯಾಪುರ ನಡುವಿನ ರಸ್ತೆ ಸಂಪರ್ಕ ಕಡಿತಗೊಂಡಿದೆ. ಉಕ್ಕಡಗಾತ್ರಿಯ ಪುಣ್ಯ ಕ್ಷೇತ್ರ ಕರಿಬಸವೇಶ್ವರ ದೇವಸ್ಥಾನದ ಸ್ನಾನಘಟ್ಟವು ಮುಳುಗಡೆಯಾಗಿದೆ. ದೇವಸ್ಥಾನ ಸಮಿತಿಯವರು ಸ್ನಾನಘಟ್ಟದ ಬಳಿ ಕಬ್ಬಿಣದ ಗೇಟ್ ಹಾಕಿ ಭಕ್ತರು ನದಿಯಲ್ಲಿ ಸ್ನಾನಕ್ಕೆ ಇಳಿಯದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ಹೊನ್ನಾಳಿ ಪಟ್ಟಣದ ಬಾಲ್ರಾಜ್ ಘಾಟ್ನಲ್ಲಿದ್ದ 13 ಕುಟುಂಬಗಳನ್ನು ಮಂಗಳವಾರ ರಾತ್ರಿ ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net