

ದಾವಣಗೆರೆ : ಸಂಸ್ಕೃತಿ, ಸಂಪ್ರದಾಯ ರಾಷ್ಟ್ರದ ಶಕ್ತಿಯಾಗಿದ್ದು, ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮದಾಗಿದೆ ಎಂದು ಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ಡಾ. ಎಂ.ಸಿ.ಶಶಿಕಾಂತ್ ಹೇಳಿದರು. ಬ್ರಾಹ್ಮಣ ಸೇವಾ ಸಂಘದಿಂದ ನಗರದ ಶಂಕರ ಸಮುದಾಯ ಭವನದಲ್ಲಿ ಭಾನುವಾರ 85 ವಸಂತ ಪೂರೈಸಿದ ತ್ರಿಮತಸ್ಥ ಹಿರಿಯ ನಾಗರಿಕರಿಗೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿರಿಯರ ವಿವೇಕವು ನಮ್ಮನ್ನು ಮುನ್ನಡೆಸಲಿ ಎಂದರು. ಎಲ್. ಶಾಮಸುಂದರ ರಾವ್, ಎಂ. ಜೆ. ಚಂದ್ರಶೇಖರ, ಅಶ್ವತ್ಥಾಚಾರ್, ಬಿ.ಕೆ. ಮೂರ್ತಿ, ಎಲ್. ಶ್ರೀಪಾದ ರಾವ್, ಎಚ್.ಸಿ.ಕುಲಕರ್ಣಿ, ಕೆ.ಎನ್.ಸ್ವಾಮಿ, ಕೆ.ಎನ್.ರಾಮಸ್ವಾಮಿ, ಗುರುನಾಥರಾವ್ ಬಿ. ಮಜುಂದಾರ್, ಸಣ್ಣಮ್ಮ, ಎನ್. ಆರ್.ರಮಾಬಾಯಿ, ಕಮಲಾಬಾಯಿ, ಸಾವಿತ್ರಮ್ಮ, ಡಿ.ಎನ್.ರುಕ್ಮಿಣಮ್ಮ, ಸರ್ವಮಂಗಳ, ಭಾರತಿ ಬ್ಯಾಹಟ್ಟಿ, ಗಿರಿಜಮ್ಮ ಇವರನ್ನು ಸನ್ಮಾನಿಸಲಾಯಿತು. ದಾವಿವಿಯಿಂದ ಗೌರವ ಡಾಕ್ಟರೇಟ್ ಪಡೆದ ಎಚ್.ಬಿ.ಮಂಜುನಾಥ್, ಹಿರಿಯರಾದ ಅಣ್ಣಾಜಿ, ಭೀಮಾಜಿ ಕುಲಗೋಡ್, ಎಸ್.ರಾಧಮ್ಮ, ರುಕ್ಮಿಣಿ ಬಾಯಿ, ಮಂದಾಕಿನಿ ಕುಲಗೋಡ್, ಯಶೋದಮ್ಮ, ವಿಮಲಮ್ಮ, ಸುಮಿತ್ರಮ್ಮ ಅವರ ಮನೆಗೆ ತೆರಳಿ ಸನ್ಮಾನಿಸಲಾಗುವುದು ಎಂದು ಸಂಘಟಕರು ತಿಳಿಸಿದರು. ಸಂಘದ ಕಾರ್ಯದರ್ಶಿ ಎಸ್. ಗೋಪಾಲ ದಾಸ್, ಡಾ. ಸಿ.ಕೆ.ಆನಂದ ತೀರ್ಥಾಚಾರ್, ಸತ್ಯನಾರಾಯಣರಾವ್, ಬಾಕೃಷ್ಣ ವೈದ್ಯ, ಉಮಾಕಾಂತ ದೀಕ್ಷಿತ್, ವಿನಾಯಕ ಡಿ. ಜೋಶಿ, ರಾಮಚಂದ್ರ ರಾವ್, ಡಿ. ಶೇಷಾಚಲ, ಉಮೇಶ ಕುಲಕರ್ಣಿ, ಗಿರೀಶ್ ನಾಡಿಗ್, ಸಂಘದ ನಾನಾ ವಿಭಾಗದ ಅಧ್ಯಕ್ಷರು, ಪದಾಧಿಕಾರಿಗಳು ಇದ್ದರು. ನಂತರ ಸಂಘದ 45 ನೇ ಸರ್ವ ಸದಸ್ಯರ ಸಭೆಯನ್ನು ನಡೆಸಲಾಯಿತು.