ಅನುಭವ ಮಂಟಪ ಪರಿಕಲ್ಪನೆ ನೀಡಿದ ಬಸವಣ್ಣ

dvg-ktj-nagara-basava-jayanti-10.jpg
Published on

ದಾವಣಗೆರೆ: ಮಹಾ ಮಾನವತಾವಾದಿ ವಿಶ್ವಗುರು ಬಸವಣ್ಣನವರು 12ನೇ ಶತಮಾನದಲ್ಲಿಯೆ ಅನುಭವ ಮಂಟಪದ ಪರಿಕಲ್ಪನೆಯ ಮೂಲಕ ಈಗಿನ ಸಂಸತ್ತಿನ ಅರಿವನ್ನು ಮೂಡಿಸಿದ್ದರು ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಹೇಳಿದರು.
 ಕೆ.ಟಿ.ಜೆ. ನಗರದ 12ನೇ ಕ್ರಾಸ್‌ನಲ್ಲಿರುವ ಶ್ರೀ ಕುರುವತ್ತಿ ಬಸವೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಬಸವ ಜಯಂತಿ ಪ್ರಯುಕ್ತ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
 ಜಾತಿ, ಮತ, ಪಂಥಗಳ ಭೇದ-ಭಾವ ಅಳಿಸಿ ಹಾಕಿ ಪುರುಷರಷ್ಟೇ ಮಹಿಳೆಯರು ಸರಿ ಸಮಾನರೆಂದು ಸಾರಿ ಅಂದಿನ ಅನುಭವ ಮಂಟಪದಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸಿದವರು ಎಂದು ಸ್ಮರಿಸಿದರು.
 ಮುಖಂಡರಾದ ಜವಳಿ ಸಂಗಪ್ಪ, ಕೇರಂ ಗಣೇಶ್, ಡಿ.ಎನ್. ಜಗದೀಶ್, ಕೆ.ಆರ್. ಪರಮೇಶ್ವರಪ್ಪ, ಗೋಣಪ್ಪ, ಚೇತನ್‌ಕುಮಾರ್, ಎಚ್. ನಾಗರಾಜ್, ಎಸ್. ಮಾನು, ಶಾಂತಕುಮಾರ್, ತಿಪ್ಪೇಶಿ, ಯೋಗಿ, ಗುರು, ಗೋಪಿ, ಬಿ.ಕೆ. ವೆಂಕಟೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net