ಚಿತ್ರ, ಶಿಲ್ಪಗಳ ಮೂಲಕ ಮತದಾನ ಜಾಗೃತಿ

awareness.jpg
Published on

ದಾವಣಗೆರೆ : ನಗರದ ಸಂಕಲನ ಸಮೂಹ ಸಂಸ್ಥೆಯು ಮತದಾನ ಜಾಗೃತಿಗಾಗಿ ಚಿತ್ರ ಮತ್ತು ಶಿಲ್ಪಗಳ ಮೂಲಕ ಅರಿವು ಮೂಡಿಸುವ ಪ್ರದರ್ಶನವನ್ನು  ಎಂಸಿಸಿ ಬಿ ಬ್ಲಾಕ್‌ನ ಬಿಐಇಟಿ ರಸ್ತೆಯ ಹಳೇ ಆರ್‌ಟಿಒ ಸರ್ಕಲ್ ಬಳಿ ಆಯೋಜಿಸಿದೆ.
  ಸಂಕಲನ ಸಂಸ್ಥೆಯ 2ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ಕಲೆ ಮತ್ತು ಸಂಸ್ಕೃತಿ ಬಿಂಬಿಸುವ ಸೆಲ್ಫ್ ಕಾರ್ನರ್ ಮಾಡಿ,ಮತದಾನ ಜಾಗೃತಿ ಸಾರುವ 58ಅಡಿಯ ಚಿತ್ರಕಲಾ ಕೃತಿಯನ್ನೂ ಇಡಲಾಗಿದೆ.
  ಈ ಪ್ರದರ್ಶನ ಸೋಮವಾರ ಆರಂಭವಾಗಿದ್ದು ಮಂಗಳವಾರವೂ ಇರಲಿದೆ.ಆಸಕ್ತರು ವೀಕ್ಷಿಸಿ ಪ್ರೋತ್ಸಾಹಿಸುವಂತೆ ಕಲಾವಿದರಾದ ರವೀಂದ್ರ ಮತ್ತು ಉಷಾ ಅರಳಗುಪ್ಪಿ ತಿಳಿಸಿದ್ದಾರೆ.
 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net