

ದಾವಣಗೆರೆ : ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಗೆ ಸ್ಪರ್ಧಿಸಲು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಭೋವಿ ಸಮುದಾಯದ ಡಿ. ಬಸವರಾಜ್ ಪರಿಶಿಷ್ಟ ಜಾತಿಯ ಕೋಟಾದಡಿ ಆಕಾಂಕ್ಷಿಯಾಗಿದ್ದಾರೆ.
ಶತಕ ದಾಟಿದ್ದ ಆಕಾಂಕ್ಷಿಗಳ ಪಟ್ಟಿಯು ಅಂತಿಮ ಹಂತಕ್ಕೆ ಬಂದಿದೆ. ನಾಲ್ಕು ದಶಕಗಳಿಂದ ತಾವು ಕಾಂಗ್ರೆಸ್ ಪಕ್ಷದಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದು ಈ ಬಾರಿ ಎಂಎಲ್ಸಿ ಟಿಕೆಟ್ ಸಿಗುವ ವಿಶ್ವಾಸವಿದೆ ಎಂದು ಬಸವರಾಜ್ ತಿಳಿಸಿದ್ದಾರೆ.