ಬುನಾದಿ ಹಂತದ ಶಿಕ್ಷಣ ಬರಲಿ

dvg-dr.-H.V.-Vamadevappa-loud-speaker.jpg
Published on

ದಾವಣಗೆರೆ : ಒಂದನೇ ತರಗತಿಗೆ ಸೇರಲು 6 ವರ್ಷ ಆಗಿರಲೇಬೇಕು ಎಂದು ನಿಗದಿ ಮಾಡಿದರೆ 5 ವರ್ಷ 10 ತಿಂಗಳು ಅಥವಾ 11 ತಿಂಗಳು ಆಗಿರುವ ಮಗುವಿಗೆ ಅನ್ಯಾಯವಾಗುತ್ತದೆ ಎಂದು ಶಿಕ್ಷಣ ತಜ್ಞ ಡಾ.ಎಚ್. ವಿ. ವಾಮದೇವಪ್ಪ ಹೇಳಿದರು.

ಆದ್ದರಿಂದ 5.5 ವರ್ಷದಿಂದ 6 ವರ್ಷದೊಳಗಿನವರು ಸೇರಬಹುದು ಎಂಬ ನಿಯಮ ತಂದರೆ ಅನುಕೂಲವಾಗುತ್ತದೆ. ಎನ್‌ಇಪಿ ವ್ಯವಸ್ಥೆಯಲ್ಲಿ ಪ್ಲೇಗ್ರೂಪ್, ಎಲ್‌ಕೆಜಿ, ಯುಕೆಜಿ, 1 ಮತ್ತು 2ನೇ ತರಗತಿ ಸೇರಿ ಬುನಾದಿ ಹಂತದ ಶಿಕ್ಷಣ ಎಂದು ಕರೆಯಲಾಗುತ್ತದೆ. ಅಂಥ ವ್ಯವಸ್ಥೆ ನಮ್ಮಲ್ಲೂ ಜಾರಿಗೆ ಬಂದರೆ ಅನುಕೂಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net