ದುರ್ಗಾಂಬಿಕ ದೇಗುಲದ ಸುತ್ತ 5 ವಾರ ಸಂತೆ

28-DVG-DUGGAMMA.jpg
Published on

ದಾವಣಗೆರೆ: ವರುಣನ ಕೃಪೆಗಾಗಿ ನಗರ ದೇವತೆ ದುರ್ಗಾಂಬಿಕಾ ದೇವಿ ದೇಗುಲದ ಸುತ್ತ 5 ವಾರಗಳ ಕಾಲ ಜು.2 ರಿಂದ 30 ರವರೆಗೆ ಸಂತೆ ನಡೆಸಲು ದೇವಸ್ಥಾನ ಟ್ರಸ್ಟ್ ನಿರ್ಧರಿಸಿದೆ.
ರಾಜ್ಯದಲ್ಲಿ ಮಳೆ, ಬೆಳೆ ಇಲ್ಲದೆ ಬರಗಾಲ ಪರಿಸ್ಥಿತಿ ಆವರಿಸಿದ ಸಂದರ್ಭದಲ್ಲಿ ರೈತರು, ವ್ಯಾಪಾರಸ್ಥರು, ಸಾರ್ವಜನಿಕರು ಕಂಗಾಲಾಗಿ ದುಗ್ಗಮ್ಮ ದೇವಿಯಲ್ಲಿ ಪ್ರಾರ್ಥಿಸಿ ದೇಗುಲದ ಸುತ್ತ-ಮುತ್ತ ಸಂತೆ ಹಾಕಿದಾಗ ಮಳೆ ಧಾರಕಾರವಾಗಿ ಸುರಿದಿದೆ ಎಂಬ ವಾಡಿಕೆ ಇದೆ.
ಭಕ್ತಾದಿಗಳು, ಆರಕ್ಷಕರು ಹಾಗೂ ವೃತ್ತ ನಿರೀಕ್ಷಕರು ತಮ್ಮ ಸಿಬ್ಬಂದಿಯೊಂದಿಗೆ ಸಹಕರಿಸಿ ಪ್ರತಿ ವಾರ ಕೈಗೊಳ್ಳುವ ಕೆಲಸದಲ್ಲಿ ಯಾರಿಗೂ ತೊಂದರೆ ಆಗದಂತೆ, ಅಹಿತಕರ ಘಟನೆಗಳು ನಡೆಯದಂತೆ ಸಂತೆ ನಡೆಸಲು ಅನುವು ಮಾಡಿಕೊಡಬೇಕು ಎಂದು ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net