ವಿಶ್ವ ರಂಗಭೂಮಿ ದಿನಾಚರಣೆ

IMG-20250326-WA0000.jpg
Published on

ದಾವಣಗೆರೆ : ವೃತ್ತಿ ರಂಗಭುಮಿ ರಂಗಾಯಣದಿಂದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮವನ್ನು ಗುರುವಾರ ಸಂಜೆ 6.30ಕ್ಕೆ ನಗರದ ಶಿವಯೋಗಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಹೇಳಿದರು.  ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿಯ ಕಾರ್ಯಕ್ರಮವನ್ನು ವಿಶೇಷವಾಗಿ ಆಯೋಜಿಸಲಾಗಿದೆ ಎಂದು ತಿಳಿಸಿದರು.  ಮೈಸೂರಿನ ಹಿರಿಯ ರಂಗ ಸಂಗೀತ ನಿರ್ದೇಶಕ ವಿದ್ವಾನ್ ವೈ.ಎಂ. ಪುಟ್ಟಣ್ಣಯ್ಯ ಅವರ ರಂಗ ಗೀತಾಂಜಲಿ ತಂಡದಿಂದ ಎರಡು ಗಂಟೆಗಳ ಕಾಲ ರಂಗಸಂಗೀತವನ್ನು ಪ್ರಸ್ತುತಪಡಿಸಲಾಗುವುದು ಎಂದರು.  ರಂಗಭೂಮಿಯ ಹಿರಿಯ ಕಲಾವಿದ ಬಿ.ಇ. ತಿಪ್ಪೇಸ್ವಾಮಿ ಕಾರ್ಯಕ್ರಮ ಉದ್ಘಾಟಿಸುವರು. ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸುವರು ಎಂದು ತಿಳಿಸಿದರು.  ರಂಗಾಯಣದ ವಿಶೇಷಾಧಿಕಾರಿ ರವಿಚಂದ್ರ, ನೀಲಗುಂದ ಬಸವನಗೌಡ, ಸೌಮ್ಯಾ ಬನಹಟ್ಟಿ ಸುದ್ದಿಗೋಷ್ಠಿಯಲ್ಲಿದ್ದರು.    

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net