ಬೀದಿನಾಯಿ ದಾಳಿಗೆ ಬಾಲಕಿ ಬಲಿ

dvg-Khadeera-banu-dog-bite.jpg
Published on

ದಾವಣಗೆರೆ  : ನಾಲ್ಕು ತಿಂಗಳ ಹಿಂದೆ ನಗರದ ಶಾಸ್ತ್ರಿ ಲೇಔಟ್ನಲ್ಲಿ ಆಟವಾಡುವಾಗ ಬೀದಿನಾಯಿ ದಾಳಿಗೆ ಒಳಗಾಗಿದ್ದ 4 ವರ್ಷದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ರಾತ್ರಿ ಮೃತಪಟ್ಟಿದ್ದಾಳೆ.  ಖದೀರಾ ಬಾನು ಮೃತ ಬಾಲಕಿ. ಬೆಂಗಳೂರು ಮತ್ತಿತರ ಕಡೆ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಬಾಲಕಿಗೆ ರೇಬಿಸ್ ಕಾಯಿಲೆಗೆ ಚಿಕಿತ್ಸೆ ನೀಡಲಾಗಿತ್ತು. ಅದರಿಂದ ಪ್ರಯೋಜನವಾಗದೇ ಬಾಲಕಿ ಕೊನೆಯುಸಿರೆಳೆದಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net