ಕೊಲೆ ಪ್ರಕರಣ ಪತ್ತೆಗೆ ನೆರವಾದ ಶ್ವಾನ ‘ತಾರಾ’

nai.jpg
Published on

ದಾವಣಗೆರೆ: ನಗರಕ್ಕೆ ಸಮೀಪದ ಮಲ್ಲಶೆಟ್ಟಿಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ-48ರ ಸರ್ವೀಸ್ ರಸ್ತೆಯಲ್ಲಿ ನಡೆದಿದ್ದ ಕೊಲೆ ಪ್ರಕರಣದ ಆರೋಪಿಯನ್ನು ಪತ್ತೆಹಚ್ಚಲು ಜಿಲ್ಲಾ ಶ್ವಾನ ದಳದ ತಾರಾ ಎಂಬ ಶ್ವಾನವು ಪ್ರಮುಖ ಪಾತ್ರ ವಹಿಸಿದೆ.
 ಇಲ್ಲಿನ ಶ್ರೀರಾಮನಗರದ ಶಿವಯೋಗೀಶ್ ಬಂಧಿತ ಆರೋಪಿ. ಈತನು ಆ. 6 ರಂದು ರಾತ್ರಿ ನರಸಿಂಹ (26) ಎಂಬುವರ ತಲೆಗೆ ಬಲವಾದ ವಸ್ತುವಿನಿಂದ ಹೊಡೆದು ಕೊಲೆ ಮಾಡಿದ್ದ.
 ಕೊಲೆಗೆ ಹಣಕಾಸು ವ್ಯವಹಾರ ಕಾರಣವಾಗಿದೆ. ನರಸಿಂಹ, ಆರೋಪಿ ಶಿವಯೋಗೀಶ್‌ನಿಂದ 35 ಸಾವಿರ ರೂ. ಮುಂಗಡವಾಗಿ ಪಡೆದು, ಕೆಲಸಕ್ಕೂ ಬಾರದೇ ಹಣವನ್ನೂ ವಾಪಸ್ ಕೊಡದೆ ಸತಾಯಿಸುತ್ತಿದ್ದ. ತನ್ನ ಮೇಲೆ ದ್ವೇಷ ಸಾಧಿಸುತ್ತಿದ್ದ ಎಂದು ಶಿವಯೋಗಿ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾನೆ.
 ಆರೋಪಿಯ ಪತ್ತೆಗೆ ಹೆಚ್ಚುವರಿ ಎಸ್ಪಿ ರಾಮಗೊಂಡ ಬಸರಗಿ, ಡಿವೈಎಸ್ಪಿ ಬಿ.ಎಸ್. ಬಸವರಾಜ್ ಮಾರ್ಗದರ್ಶನದಲ್ಲಿ, ಪೊಲೀಸ್ ಇನ್‌ಸ್ಪೆಕ್ಟರ್ ಇ.ವೈ. ಕಿರಣ್ ಕುಮಾರ್, ಪಿಎಸ್‌ಐ ಹಾರೂನ್ ಅಖರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತು.
 ಈ ವೇಳೆ ‘ತಾರಾ’ ಶ್ವಾನವು ಘಟನಾ ಸ್ಥಳದಿಂದ 8 ಕಿ.ಮೀ. ದೂರ ಕ್ರಮಿಸಿ, ಆರೋಪಿಯ ಗುರುತು ಪತ್ತೆಗೆ ಪೊಲೀಸರಿಗೆ ನೆರವಾಯಿತು.
 ಎಎಸ್‌ಐ ನಾರಪ್ಪ, ಸಿಬ್ಬಂದಿಯವರಾದ ಜಗದೀಶ, ಮಂಜುನಾಥ, ಮಹೇಶ್, ವಿಶ್ವನಾಥ, ಅಣ್ಣಯ್ಯ, ಮಂಜುನಾಥ ನಾಯ್ಕ, ದೇವೇಂದ್ರನಾಯ್ಕ, ಕೆ.ಎಂ. ಪ್ರಕಾಶ, ಪ್ರವೀಣ ಅಂತರವಳ್ಳಿ ಕಾರ್ಯಾಚರಣೆ ನಡೆಸಿದ ತಂಡದಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net