ಶಿವಮೊಗ್ಗದಲ್ಲಿ 20ರಂದು ವೈದ್ಯರ ಸಮ್ಮೇಳನ

IMG-20250918-WA0018.jpg
Published on

ದಾವಣಗೆರೆ  :  ಶಿವಮೊಗ್ಗದ ಸರ್ಜಿ ಕನ್ವೆನ್ಷನ್ ಹಾಲ್‌ನಲ್ಲಿ ಸೆ. 20ರಂದು ವೈದ್ಯರ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಅಂತಾರಾಷ್ಟ್ರೀಯ ಲಿಂಗಾಯತ ಯುವ ವೇದಿಕೆಯ ಶಿವಮೊಗ್ಗ ಚಾಪ್ಟರ್‌ನ ಕಾರ್ಯದರ್ಶಿ ರವೀಂದ್ರ ಬೆಣ್ಣೆಹಳ್ಳಿ ಹೇಳಿದರು.  ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಮಾತ್ರವಲ್ಲದೇ ಹೊರ ರಾಜ್ಯಗಳಿಂದಲೂ 350ಕ್ಕೂ ಅಧಿಕ ವೈದ್ಯರು, ವೈದ್ಯೋದ್ಯಮಿಗಳು ಹಾಗೂ ವೈದ್ಯಕೀಯ ಕ್ಷೇತ್ರದ ಚಿಂತಕರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.  ಬೆಳಗ್ಗೆ 9.30ಕ್ಕೆ ಉದ್ಘಾಟನಾ ಸಮಾರಂಭದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್, ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ, ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಶಾಸಕ ಚನ್ನಬಸಪ್ಪ ಎಸ್.ಎನ್, ವಿಧಾನ ಪರಿಷತ್ ಸದಸ್ಯರಾದ ಧನಂಜಯ ಸರ್ಜಿ, ನವೀನ್ ಕೆ., ವೇದಿಕೆಯ ಅಧ್ಯಕ್ಷ ಸಂತೋಷ್ ಕೆಂಚಾಂಬ ಭಾಗವಹಿಸಲಿದ್ದಾರೆ ಎಂದರು.  ನಂಜಪ್ಪ ಆಸ್ಪತ್ರೆಯ ಡಾ.ವಿಜಯ್, ನಿವೃತ್ತ ಜಿಲ್ಲಾ ಆಯುಷ್ ಅಧಿಕಾರಿ ಡಾ.ಸಿದ್ದೇಶ್, ಡಾ. ಸತೀಶ್ ಬಿ.ಜಿ., ಎಂ.ಎನ್. ಹಿರೇಮಠ, ಸೌಮ್ಯಾ ಗುರುರಾಜ್, ಶಿವರಾಜ್ ಮಠದ್ ಇದ್ದರು.  ...    

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net