ಗಾಂಧಿ ಭವನದಲ್ಲಿ ಚಿಂತನ ಗೋಷ್ಠಿ

dvg-Gandhi-bhavana-14.jpg
Published on

ದಾವಣಗೆರೆ : ಗಾಂಧಿ ಭವನ ಹಾಗೂ ಸಾರ್ವಜನಿಕ ಗ್ರಂಥಾಲಯ ಇಲಾಖೆ ವತಿಯಿಂದ ನಗರದ ಗಾಂಧಿ ಭವನದಲ್ಲಿ ಇತ್ತೀಚೆಗೆ, ಗಾಂಧೀಜಿ ಅಭಿಮಾನಿಗಳು ಮತ್ತು ಓದುಗರ ಸಮ್ಮುಖದಲ್ಲಿ ಪ್ರಥಮ ಚಿಂತನ ಗೋಷ್ಠಿಯ ಉದ್ಘಾಟನೆ ನೆರವೇರಿತು.
 ಸಂತೇಬೆನ್ನೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ತಾಜುದ್ದೀನ್ ಬೇತೂರ್ ಮತ್ತು ತ್ಯಾವಣಿಗೆ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಮಹಾಂತೇಶ್ ನಿಟ್ಟೂರು ಅವರನ್ನು ಸಂಚಾಲಕರನ್ನಾಗಿ ಆಯ್ಕೆ ಮಾಡಲಾಯಿತು.
 ಸ್ವಾತಂತ್ರೃ ಹೋರಾಟಗಾರರ ಉತ್ತರಾಧಿಕಾರಿಗಳ ಸಂಘದ ಉಷಾರಾಣಿ, ಕರ್ನಾಟಕ ಸಾಂಸ್ಕೃತಿಕ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಎಸ್. ಅಜಯ ಕುಮಾರ್, ಗಾಂಧಿ ಗ್ರಾಮ ಸೇವಾಶ್ರಮದ ಸಾಧಕ ಕಡ್ಲೆಬಾಳ್ ಪ್ರಕಾಶ್, ಗ್ರಾಮ ಸ್ವರಾಜ್ಯ ಅಭಿಯಾನದ ಆವರಗೆರೆ ರುದ್ರಮುನಿ, ಗಾಂಧಿ ಭವನದ ಗ್ರಂಥಪಾಲಕ ಈಶ್ವರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net