

ದಾವಣಗೆರೆ : ದಕ್ಷಿಣ ಭಾರತದ ಅತಿ ದೊಡ್ಡ ವಜ್ರಾಭರಣ ಪ್ರದರ್ಶನ ಮತ್ತು ಮಾರಾಟ ನಗರದ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಮಳಿಗೆಯಲ್ಲಿ ಶನಿವಾರ ಉದ್ಘಾಟನೆಯಾಯಿತು. ಏ. 25ರ ವರೆಗೆ ನಡೆಯಲಿರುವ ಈ ಪ್ರದರ್ಶನವನ್ನು ಶ್ರೀನಿವಾಸ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್ ವ್ಯವಸ್ಥಾಪಕ ನಿರ್ದೇಶಕಿ ಸಂಧ್ಯಾ ಶ್ರೇಷ್ಠಿ ಉದ್ಘಾಟಿಸಿದರು. ಗೌರವ ಅತಿಥಿಯಾಗಿ ಪಾಲ್ಗೊಂಡಿದ್ದ ಚಿತ್ರದುರ್ಗದ ಸಹಾಯಕ ಶಿಕ್ಷಕಿ ತಬಸ್ಸುಮ್ ಬಾನು ಮಾತನಾಡಿ, ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಮಳಿಗೆಯಲ್ಲಿ ಗ್ರಾಹಕರಿಗೆ ಉತ್ತಮ, ಪ್ರಾಮಾಣಿಕ ಸೇವೆ ದೊರೆಯುತ್ತದೆ. ಸಿಬ್ಬಂದಿ ನಗು ಮುಖದಿಂದ ವ್ಯವಹರಿಸುತ್ತಾರೆ. 10 ವರ್ಷಗಳಿಂದ ನಾನು ಈ ಸಂಸ್ಥೆಯಲ್ಲಿ ಆಭರಣ ಖರೀದಿ ಮಾಡುತ್ತ ಬಂದಿದ್ದೇನೆ ಎಂದು ತಮ್ಮ ಅನುಭವ ಹಂಚಿಕೊಂಡರು. ಹರಿಹರದ ನಿವೃತ್ತ ತಾಲೂಕು ಆರೋಗ್ಯಾಧಿಕಾರಿ ಪಿ.ಎಸ್. ಸುಧಾ ಮಾತನಾಡಿ, ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಮಳಿಗೆಗೆ ಭೇಟಿ ನೀಡಿರುವುದು ನನಗೆ ತವರು ಮನೆಗೆ ಬಂದ ಅನುಭವ ನೀಡಿದೆ. ಇಲ್ಲಿನ ಸಿಬ್ಬಂದಿ ಕುಟುಂಬದ ಸದಸ್ಯರಂತೆ ಆತ್ಮೀಯವಾಗಿ ವ್ಯವಹರಿಸುತ್ತಾರೆ. ಈ ಮೊದಲು ನಾವು ಉಡುಪಿಗೆ ಹೋಗಿ ಸುಲ್ತಾನ್ ಗೋಲ್ಡ್‌ನಲ್ಲಿ ಖರೀದಿ ಮಾಡುತ್ತಿದ್ದೆವು. ಈಗ ದಾವಣಗೆರೆಯಲ್ಲೇ ಮಳಿಗೆ ಇರುವುದರಿಂದ ಹತ್ತಿರವಾಗಿದೆ ಎಂದರು. ನಿಯಾಸ್ ಬಾಷಾ, ಅಸ್ಲಂ ಬಾಷಾ, ಪೂರ್ವೀಸ್ ಬಾಟಿಕ್‌ನ ಪೂರ್ವಿ ವಾಗೀಶ್, ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಮಳಿಗೆಯ ಶಾಖಾ ವ್ಯವಸ್ಥಾಪಕ ರಾಗಿನ್, ಸಹಾಯಕ ವ್ಯವಸ್ಥಾಪಕ ಸಂತೋಷ್, ಮಾರ್ಕೆಟಿಂಗ್ ಮ್ಯಾನೇಜರ್ ಉಮರ್ ಫಾರೂಕ್ ಇದ್ದರು. ... (ಬಾಕ್ಸ್) ವಿಭಿನ್ನ ವಿನ್ಯಾಸದ ಕಲೆಕ್ಷನ್ ಪ್ರದರ್ಶನದಲ್ಲಿ ಯುಎಸ್ ಕಲೆಕ್ಷನ್, ಟರ್ಕಿಶ್ ಕಲೆಕ್ಷನ್, ಮಿಡ್ಲ್ ಈಸ್ಟ್ ಕಲೆಕ್ಷನ್, ಫ್ರೆಂಚ್ ಕಲೆಕ್ಷನ್, ಬೆಲ್ಜಿಯಮ್ ಕಲೆಕ್ಷನ್ ಸೇರಿದಂತೆ ವೈವಿಧ್ಯಮಯ ವಿನ್ಯಾಸದ ಆಭರಣಗಳ ಸಂಗ್ರಹವಿದೆ. ಉಂಗುರ, ಓಲೆ, ಬಳೆ, ಮೂಗುತಿ, ವಧುವಿಗೆ ಬೇಕಾದ ಆಭರಣಗಳು (ಬ್ರೈಡಲ್ ಕಲೆಕ್ಷನ್) ಸೇರಿ ಗ್ರಾಹಕರ ಅಭಿರುಚಿಗೆ ಅನುಗುಣವಾದ ವಜ್ರಾಭರಣಗಳು ಇಲ್ಲಿ ಲಭ್ಯವಿದೆ. ಪ್ರತಿ ಕ್ಯಾರಟ್ ಡೈಮಂಡ್ ಖರೀದಿಗೆ 8 ಸಾವಿರ ರೂ.ಗಳ ರಿಯಾಯಿತಿ ದೊರೆಯಲಿದೆ.