ಡೈಮಂಡ್ ಕ್ರಾಸ್ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ

IMG-20230809-WA0094.jpg
Published on

ದಾವಣಗೆರೆ : ದಾವಣಗೆರೆ ಹುಡುಗರು ಅಭಿನಯಿಸಿದ ಡೈಮಂಡ್ ಕ್ರಾಸ್ ಚಿತ್ರದ ಬಗ್ಗೆ ರಾಜ್ಯಾದ್ಯಂತ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇನ್ನೂ ಹತ್ತು ಸಿನಿಮಾ ಮಾಡುವ ಎನರ್ಜಿ ಲಭಿಸಿದೆ ಎಂದು ಚಿತ್ರದ ನಾಯಕ ರಜತ್ ಅಣ್ಣಪ್ಪ ಹೇಳಿದರು.
  ಧಾರವಾಡ, ಶಿವಮೊಗ್ಗ, ಮೈಸೂರು, ಬೆಂಗಳೂರು  ಮೊದಲಾದ ಕಡೆ ಹೊಸಬರ ಸಿನಿಮಾ ಎಂದು ಕೊಳ್ಳದೆ ಪ್ರೇಕ್ಷಕರು ಚಿತ್ರ ವೀಕ್ಷಿಸಿ ಪ್ರೋತ್ಸಾಹ ನೀಡುತ್ತಿದ್ದಾರೆ. ಹೊಸಪೇಟೆಯಲ್ಲಿ ಒಂದೇ ದಿನ ಸುಮಾರು 2 ಸಾವಿರ ಜನರು  ವೀಕ್ಷಣೆ ಮಾಡಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಸಂತಸ ಹಂಚಿಕೊಂಡರು.
 ಸಾಹಸ ದೃಶ್ಯಗಳಲ್ಲಿ ಯಾವುದೇ ಡ್ಯೂಪ್ ಹಾಗೂ ರೋಪ್ ಬಳಸದೆ ರಿಯಲ್ ಆಕ್ಷೃನ್ ಮಾಡಿ ರುವುದು  ವಿಶೇಷವಾಗಿದೆ. ಹಿಂದಿ ಭಾಷೆಯಲ್ಲೂ ಚಿತ್ರ ಡಬ್ ಆಗುತ್ತಿದೆ. ಚಿತ್ರದ ಎರಡನೇ ಭಾಗವೂ  ಖಂಡಿತ ಬರಲಿದ್ದು ಇದಕ್ಕಿಂತ  ತುಂಬಾ ಚೆನ್ನಾಗಿ ಮೂಡಿಬರಲಿದೆ ಎಂದು ತಿಳಿಸಿದರು.
 ಹಾಲಿವುಡ್‌ನ ಟೋನಿಜ ಅವರ ವಿಡಿಯೋ ನೋಡಿ ಸಾಹಸ ಕಲೆ ಕಲಿತಿದ್ದೇನೆ ಹಾಗೂ ಎಲ್ಲ ಗೆಳೆಯರಿಗೂ ತರಬೇತಿ ನೀಡಿದ್ದೇನೆ ಎಂದ ಅವರು ಎರಡು, ಮೂರು ಸಿನಿಮಾಗಳಿಗೆ ನನಗೆ ಆಫರ್ ಬಂದಿದೆ ಎಂದರು.
 ಚಿತ್ರದ ಮತ್ತೊಬ್ಬ ನಟ ರಾಜು ಮಂಜಪ್ಪ ಮಾತನಾಡಿ, ಕೂಲಿ ಕಾರ್ಮಿಕರ ಮಕ್ಕಳಾದ ತಾವು ಟಿವಿ ಕಾರ್ಯಕ್ರಮ ವೀಕ್ಷಿಸುವ ಮೂಲಕ ಸಮರ ಕಲೆಯ ಪಟ್ಟು ಕಲಿತಿದ್ದೇವೆ. ಎಲೆಮರೆಯ ಕಾಯಿಯಂತಿದ್ದ ಪ್ರತಿಭೆಗಳು ಮಾಧ್ಯಮಗಳ ಮೂಲಕ ರಾಜ್ಯಾದ್ಯಂತ ಪರಿಚಯಗೊಳ್ಳುವಂತಾಗಿದೆ. ಚಿತ್ರದ ನಿರ್ದೇಶಕರು ಗುರುತಿಸಿ ಅವಕಾಶ ನೀಡಿದ್ದಾರೆ ಎಂದು ಧನ್ಯವಾದ ಸಲ್ಲಿಸಿದರು.
 ಆರ್.ನಾಗರಾಜ್, ಶೀತಲ್ ಜಿ. ನಾಯಕ್, ಶರತ್ ರೋಜಿ, ಜಾನಿ, ಶಶಿ ಕರಾಟೆ, ರವಿ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net