

ದಾವಣಗೆರೆ : ಜಿಲ್ಲೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಡೆಂೆ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿವೆ. 2014 ರಲ್ಲಿ 713 ಪ್ರಕರಣಗಳು ವರದಿಯಾಗಿದ್ದವು. ಈ ವರ್ಷ ಜುಲೈ ಅಂತ್ಯದ ವರೆಗೆ ಕೇವಲ 30 ಕೇಸ್‌ಗಳು ಪತ್ತೆಯಾಗಿವೆ. ಕಳೆದ ವರ್ಷ ಒಟ್ಟು 7379 ಡೆಂೆ ಪ್ರಕರಣಗಳನ್ನು ಪರೀಕ್ಷಿಸಲಾಗಿತ್ತು. ಜನವರಿಯಲ್ಲಿ 23, ಫೆಬ್ರವರಿಯಲ್ಲಿ 15, ಮಾರ್ಚ್ 29, ಏಪ್ರಿಲ್ 20, ಮೇ 27, ಜೂನ್ 41 ಹಾಗೂ ಜುಲೈ ತಿಂಗಳೊಂದರಲ್ಲೇ 251 ಕೇಸ್ ವರದಿಯಾಗಿದ್ದವು. ಈ ವರ್ಷ ಇದುವರೆಗೆ 2040 ಡೆಂೆ ಪ್ರಕರಣ ಪರೀಕ್ಷಿಸಲಾಗಿದೆ. ಜನವರಿಯಲ್ಲಿ 4, ಫೆಬ್ರವರಿ 2, ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ತಲಾ 3, ಮೇ 6, ಜೂನ್ 8 ಹಾಗೂ ಜುಲೈನಲ್ಲಿ ಕೇವಲ 4 ಪಾಸಿಟಿವ್ ಪ್ರಕರಣ ಕಂಡುಬಂದಿವೆ. ಡೆಂೆ ಪ್ರಕರಣಗಳು ಏರಿಳಿತ ಕಾಣುತ್ತಿರುತ್ತವೆ. ಈ ಬಾರಿ ಇಳಿಮುಖವಾಗಿದೆ. ಪ್ರಸ್ತುತ ಮುಂಗಾರಿನಲ್ಲಿ ಬಿಟ್ಟು ಬಿಟ್ಟು ಮಳೆಯಾಗುತ್ತಿದೆ. ಈ ರೀತಿಯ ವಾತಾವರಣದಲ್ಲಿ ಡೆಂೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಆದರೆ ಈ ಬಾರಿ ಹಾಗೆ ಆಗಿಲ್ಲ.