ಕಕ್ಕರಗೊಳ್ಳದಲ್ಲಿ ಡೆಂಘೆ ವಿರೋಧಿ ಮಾಸಾಚರಣೆ

DVG-KAKKARAGOLLA-15.jpg
Published on

ದಾವಣಗೆರೆ :  ತಾಲೂಕಿನ ಕಕ್ಕರಗೊಳ್ಳ ಗ್ರಾಮದಲ್ಲಿ ಸೋಮವಾರ ರಾಷ್ಟ್ರೀಯ ಡೆಂೆ ವಿರೋಧಿ ಮಾಸಾಚರಣೆ ಜಾಥಾ ಕಾರ್ಯಕ್ರಮ ನಡೆಯಿತು.  ಗ್ರಾಮ ಪಂಚಾಯಿತಿ ಸದಸ್ಯರು, ಶಾಲಾ ಶಿಕ್ಷಕರು ಹಾಗೂ ಊರಿನ ಮುಖಂಡರು ಉದ್ಘಾಟಿಸಿದರು. ಜಾಥಾ ಮೂಲಕ ಗ್ರಾಮದ ಜನರಿಗೆ ಡೆಂೆ ಜ್ವರ ನಿಯಂತ್ರಣಕ್ಕೆ ಅರಿವು ಮೂಡಿಸಲಾಯಿತು.  ಹಿರಿಯ ಆಡಳಿತ ವೈದ್ಯಾಧಿಕಾರಿ ಡಾ.ಎಲ್.ಡಿ. ವೆಂಕಟೇಶ್ ಮಾತನಾಡಿ, ಡೆಂೆ ಮಹಾಮಾರಿ ಈಡಿಸ್ ಈಜಿಪ್ಟೈ ಸೊಳ್ಳೆಗಳು ಹಗಲು ಹೊತ್ತಿನಲ್ಲಿ ಕಚ್ಚುವುದರಿಂದ ಬರುತ್ತದೆ. ಮಕ್ಕಳು ಹಾಗೂ ವಯಸ್ಸಾದವರಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ ಎಂದು ತಿಳಿಸಿದರು.  ಅತಿ ಜ್ವರ, ಕಣ್ಣು ನೋವು, ತಲೆನೋವು. ವಾಕರಿಕೆ, ವಾಂತಿ. ಕೀಲು ಸ್ನಾಯು ನೋವು, ಚರ್ಮದ ದದ್ದು ಮೂಗಿನಲ್ಲಿ ರಕ್ತಸ್ರಾವ ಡೆಂಗ್ಯೂ ಜ್ವರದ ಪ್ರಮುಖ ಲಕ್ಷಣಗಳಾಗಿವೆ. ಇವು ಕಂಡುಬಂದಲ್ಲಿ  ತಕ್ಷಣ ವೈದ್ಯರ ಬಳಿ ಹೋಗಿ ಪರೀಕ್ಷಿಸಿಕೊಳ್ಳಬೇಕು ಎಂದರು.  ಸೊಳ್ಳೆಗಳ ನಿಯಂತ್ರಣ, ಸೊಳ್ಳೆ ನಿವಾರಕ ಬಳಕೆ, ಸೊಳ್ಳೆ ಕಚ್ಚದಂತೆ ಪರದೆ ಬಳಕೆ, ಪೂರ್ಣ ಉಡುಪು ಧರಿಸುವುದು, ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರ ವಹಿಸುವುದು, ನೀರಿನ ಸಂಗ್ರಹ ಮುಚ್ಚಿಡುವುದು ಹಾಗೂ ವಾರಕ್ಕೊಮ್ಮೆ ನೀರಿನ ಸಂಗ್ರಹ ಸ್ವಚ್ಛತೆ ಹಾಗೂ ಘನ ತ್ಯಾಜ್ಯ ವಸ್ತುಗಳ ಸಮರ್ಪಕ ವಿಲೇವಾರಿ ಸುರಕ್ಷಿತ ಕ್ರಮಗಳಾಗಿವೆ ಎಂದು ಹೇಳಿದರು.  ಗ್ರಾಪಂ ಸದಸ್ಯರಾದ ಗಾಯತ್ರಮ್ಮ, ರೇಣುಕಮ್ಮ, ಪ್ರೌಢಶಾಲೆ ಮುಖ್ಯಶಿಕ್ಷಕಿ ಯಮುನಾ ಬಡಿಗೇರ, ಶಾಲಾ ವಿದ್ಯಾರ್ಥಿಗಳು. ಆರೋಗ್ಯ ಸಿಬ್ಬಂದಿ, ಗ್ರಾಮಸ್ಥರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net