ದಾವಣಗೆರೆ : ಇಲ್ಲಿನ ಕೆಟಿಜೆ ನಗರ ನಿವಾಸಿ, ಹಿರಿಯ ಕಾರ್ಮಿಕ ನಾಯಕ, ಸಿಪಿಐ ಮತ್ತು ಎಐಟಿಯುಸಿ ಜಿಲ್ಲಾ ಸಮಿತಿ ಖಜಾಂಚಿ ಆನಂದರಾಜ್ (75) ಶುಕ್ರವಾರ ನಿಧನರಾದರು. ಅವರಿಗೆ ಒಬ್ಬ ಪುತ್ರ, ಮೂವರು ಪುತ್ರಿಯರಿದ್ದಾರೆ. ನಗರದ ಆರ್.ಎಚ್. ಬೃಂದಾವನದಲ್ಲಿ ಶನಿವಾರ ಅಂತ್ಯಕ್ರಿಯೆ ನೆರವೇರಲಿದೆ. ಆನಂದರಾಜ್ ಹಲವು ಕಾರ್ಮಿಕ ಹೋರಾಟಗಳಲ್ಲಿ ಪಾಲ್ಗೊಂಡಿದ್ದರು.