ಬ್ರಾಹ್ಮಣ ಸಮಾಜದ ಮುಖಂಡ ಪಿ.ಜಿ. ನಿರಂಜನ್ ನಿಧನ

dvg-P.G.-Niranjan-nidhana-06.jpg
Published on

ದಾವಣಗೆರೆ :  ಬ್ರಾಹ್ಮಣ ಸಮಾಜ ಸೇವಾ ಸಂಘದ ಸದಸ್ಯ ಪಿ.ಜಿ. ನಿರಂಜನ್ (71) ಮಂಗಳವಾರ ಬೆಂಗಳೂರಿನಲ್ಲಿ ನಿಧನರಾದರು.  ಅವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ. ಬೆಂಗಳೂರಿನ ಜೆ.ಪಿ. ನಗರದ ಶವಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿತು.  ನಿರಂಜನ್ ಅವರು ಬ್ರಾಹ್ಮಣ ಸಮಾಜ ಸೇವಾ ಸಂಘದ ಅಡಿಯಲ್ಲಿ ಸ್ಥಾಪಿತವಾಗಿರುವ ದತ್ತಿ ವಿದ್ಯಾರ್ಥಿ ವೇತನ ನಿಧಿಯ ಸಂಸ್ಥಾಪಕ ದಾನಿಯಾಗಿದ್ದರು. ಬ್ರಾಹ್ಮಣ ವಿದ್ಯಾರ್ಥಿ ನಿಲಯದ ಅಧ್ಯಕ್ಷರಾಗಿ, ವಿಪ್ರ ವಟು ಶಿಕ್ಷಣ ಸಮಿತಿಯ ಸದಸ್ಯರಾಗಿ, ಶ್ರೀ ಶಂಕರ ಸೇವಾ ಸಂಘದ ಕಾರ್ಯಕಾರಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net