ರಾಯಭಾರ ಕಚೇರಿ ಅಧಿಕಾರಿಗಳ ಜತೆ ನಿರಂತರ ಸಂಪರ್ಕ

DC_Venkatesh_DVG-1.jpg
Published on

ದಾವಣಗೆರೆ : ಅಮೆರಿಕದಲ್ಲಿ ಇಂಜಿನಿಯರ್ ದಂಪತಿ ಹಾಗೂ ಪುತ್ರನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳ ಜತೆಗೆ ನಿರಂತರ ಸಂಪರ್ಕ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸೋಮವಾರ ಮರಣೋತ್ತರ ಪರೀಕ್ಷೆ ನಡೆಯಲಿದೆ ಎಂದು ಹೇಳಿದರು.
ಮೃತ ದೇಹಗಳನ್ನು ದೇಶಕ್ಕೆ ತರುವ ಆಲೋಚನೆ ಇದೆ ಎಂದು ಅವರ ಕುಟುಂಬಸ್ಥರು ಹೇಳಿದ್ದಾರೆ. ಇದಕ್ಕಾಗಿ ಪ್ರತ್ಯೇಕ ಏಜೆನ್ಸಿ ಗುರುತಿಸಲಾಗಿದೆ. ದೇಶಕ್ಕೆ ತರುವ ಕೋರಿಕೆಯಿದ್ದರೆ ಸಂಪೂರ್ಣ ಸಹಕಾರ ನೀಡುವುದಾಗಿ ರಾಯಭಾರ ಕಚೇರಿ ಅಧಿಕಾರಿ ಹೇಳಿದ್ದಾರೆ ಎಂದರು.

ನ್ಯೂಯಾರ್ಕ್ ಪೊಲೀಸರು ಹಾಗೂ ಅಲ್ಲಿನ ಸರ್ಕಾರ ಪ್ರಕರಣವನ್ನು ತೀವ್ರ ತನಿಖೆಗೆ ಒಳಪಡಿಸಿದೆ. ತನಿಖೆಯ ನಂತರ ಮುಂದಿನ ದಿನಗಳಲ್ಲಿ ಎಲ್ಲ ವಿಚಾರಗಳು ತಿಳಿಯಲಿವೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net