18ಕ್ಕೆ ಡಾ. ಸುನಿಧಿ ಘಟಿಕರ್ ಭರತನಾಟ್ಯ ರಂಗ ಪ್ರವೇಶ

dvg-Sunidhi-13.jpg
Published on

ದಾವಣಗೆರೆ : ಶ್ರೀ ಶಾರದಾ ಸಂಗೀತ ಮತ್ತು ನೃತ್ಯ ಕಲಾ ಶಾಲೆ ವತಿಯಿಂದ ವಿದುಷಿ ಡಾ. ಸುನಿಧಿ ಎಂ. ಘಟಿಕರ್ ಅವರ ಭರತನಾಟ್ಯ ರಂಗ ಪ್ರವೇಶ ಕಾರ್ಯಕ್ರಮ ಆ. 18ರಂದು ಸಂಜೆ 5 ಗಂಟೆಗೆ ನಗರದ ಕುವೆಂಪು ಕನ್ನಡ ಭವನದಲ್ಲಿ ನಡೆಯಲಿದೆ.  ಹಿರಿಯ ಲೆಕ್ಕ ಪರಿಶೋಧಕ ಮತ್ತು ಕೈಗಾರಿಕೋದ್ಯಮಿ ಡಾ. ಅಥಣಿ ಎಸ್. ವೀರಣ್ಣ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕರ್ನಾಟಕ ಕಲಾ ವಿದುಷಿ ಡಾ. ಶೀಲಾ ಶ್ರೀಧರ್, ನಾಟ್ಯಕಲಾ ಸಿಂಧು ವಿದ್ವಾನ್ ಜಿ.ಬಿ. ಜನಾರ್ದನ್, ಎಸ್. ರಘುನಾಥ ಶಂಕರ್, ಡಾ. ಎನ್.ಎಸ್. ಹರ್ಷ, ಡಾ. ಟಿ.ವಿ. ರಾಜು ಪಾಲ್ಗೊಳ್ಳುವರು. ವಿದ್ವಾನ್ ರಾಜಗೋಪಾಲ ಭಾಗವತ ಮತ್ತು ವಿದುಷಿ ಪೂರ್ಣಿಮಾ ಭಾಗವತ ಇರುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net