ದುಬೈ ಕನ್ನಡಿಗರ ಮನ ಗೆದ್ದ ಚಿರಂತನ ಕಲಾವಿದೆಯರು

chir.jpg
Published on

ದಾವಣಗೆರೆ : ದುಬೈನ ಕರ್ನಾಟಕ ಸಂಘದಿಂದ ಅಲ್ಲಿನ ಅಲ್ ನಸರ್ ಲೀಸರ್ ಲ್ಯಾಂಡ್, ಐಸ್ ರಿಂಕ್‌ನಲ್ಲಿ ಭಾನುವಾರ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ‘ಚಿರಂತನ’ ತಂಡ ವಿಶೇಷ ನೃತ್ಯ ಪ್ರದರ್ಶನಗಳನ್ನು ನೀಡಿ ದುಬೈ ಕನ್ನಡಿಗರ ಮನ ಗೆದ್ದಿತು.
 ನಾಡ ದೇವತೆ ಚಾಮುಂಡೇಶ್ವರಿಯ ನೃತ್ಯ ರೂಪಕ ಮತ್ತು ವಿಭಿನ್ನ ಜಾನಪದ ನೃತ್ಯಗಳನ್ನು ಚಿರಂತನದ ಕಲಾವಿದೆಯರು ಆಕರ್ಷಕವಾಗಿ ಪ್ರದರ್ಶಿಸಿದರು. ಅತಿಥಿಗಳಾಗಿದ್ದ ಸಂಸದೆ ಸುಮಲತಾ ಅಂಬರೀಶ್ ಹಾಗೂ ಚಿತ್ರ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರು ಚಿರಂತನ ತಂಡದ ವಿದ್ಯಾರ್ಥಿನಿಯರನ್ನು ಕುರಿತು ಪ್ರಶಂಸೆ ವ್ಯಕ್ತಪಡಿಸಿದರು.
 ವಿಜೃಂಭಣೆಯ ಈ ರಾಜ್ಯೋತ್ಸವ ಸಮಾರಂಭದ ಆಯೋಜನೆಯಲ್ಲಿ ಚಿರಂತನ ತಂಡವು ಕರ್ನಾಟಕ ಸಂಘದ ಜತೆಗೆ ಕೈಜೋಡಿಸಿ ಮೂರು ತಿಂಗಳಿಂದಲೂ ತಯಾರಿ ನಡೆಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net