ಗಮನ ಸೆಳೆದ ನೃತ್ಯ ನಮನ

dance.jpg
Published on

ದಾವಣಗೆರೆ : ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವದ ಪ್ರಯುಕ್ತ ನಗರದ ಕೆ.ಬಿ. ಬಡಾವಣೆಯ ರಾಯರ ಮಠದಲ್ಲಿ ಗುರುವಾರ ಸಂಜೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.
 ನಮನ ಅಕಾಡೆಮಿಯ ವಿದುಷಿ ಮಾಧವಿ ಡಿ.ಕೆ. ಮತ್ತು ಶಿಷ್ಯ ವೃಂದದವರು ವಿಶೇಷ ಭರತನಾಟ್ಯ ಕಾರ್ಯಕ್ರಮ ನಡೆಸಿಕೊಟ್ಟರು.
 ಗಣೇಶ ವಂದನ, ನಟರಾಜ ಸ್ತುತಿ, ಪುಷ್ಪಾಂಜಲಿ, ದಶಾವತಾರ ಹಾಗೂ ಇನ್ನೂ ಅನೇಕ ಶಾಸ್ತ್ರೀಯ ನೃತ್ಯಗಳನ್ನು  ಮತ್ತು ವಿಶೇಷವಾಗಿ ಶ್ರೀ ರಾಘವೇಂದ್ರ ಸ್ವಾಮಿಗಳ ಜೀವನ ಆಧಾರಿತ ‘ಕಲ್ಪವೃಕ್ಷ’ ಎಂಬ ನೃತ್ಯರೂಪಕವನ್ನು ಸುಂದರವಾಗಿ ಪ್ರಸ್ತುತಪಡಿಸಿದರು. ಅಕಾಡೆಮಿಯ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ ನೀಡಿದರು.
 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net