ಸಂಸ್ಕೃತಿ, ಪರಂಪರೆಯ ಝಲಕ್

dvg-selfi.jpg
Published on

ದಾವಣಗೆರೆ : ನಗರದಲ್ಲಿ ಶನಿವಾರ ಆರಂಭವಾದ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ನ ಅಧಿವೇಶನ ಆಯೋಜನೆಯಲ್ಲಿ ಭಾರತೀಯ ಸಂಸ್ಕೃತಿ, ಪರಂಪರೆಯ ಝಲಕ್ ಕಂಡುಬಂದಿತು. ವೇದಿಕೆಯಲ್ಲಿ ಅತಿಥಿಗಳ ಮುಂದೆ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲಿಗಳಿಗೆ ಬದಲಾಗಿ ತಾಮ್ರದ ತಂಬಿಗೆಗಳನ್ನು ಇಡಲಾಗಿತ್ತು. ಉಡುಗೆ-ತೊಡುಗೆ, ಅತಿಥಿಗಳನ್ನು ಸ್ವಾಗತಿಸಿದ ವಿಧಾನ, ಎಲ್ಲದರಲ್ಲೂ ನಮ್ಮತನವಿತ್ತು.  ಬೆಳಗಿನ ತಿಂಡಿ, ಮಧ್ಯಾಹ್ನದ ಊಟವನ್ನು ಅಚ್ಚುಕಟ್ಟಾಗಿ ವ್ಯವಸ್ಥೆಗೊಳಿಸಲಾಗಿತ್ತು. ಅದರಲ್ಲೂ ಬಾಳೆ ಎಲೆಯ ಊಟ. ಸ್ಟೀಲ್ ಲೋಟಗಳ ಬಳಗೆ ಪರಿಸರಸ್ನೇಹಿಯಾಗಿತ್ತು. ವಿವಿಧ ಜಿಲ್ಲೆಗಳಿಂದ ಬಂದಿದ್ದ ಪ್ರತಿನಿಧಿಗಳು ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸ್ವಯಂ ಸೇವಕರು ಅಧಿವೇಶನದ ಯಶಸ್ಸಿಗಾಗಿ ಶ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net