ದೇಶದ ಸಂಸ್ಕೃತಿ ವಿಶ್ವದಲ್ಲೇ ಶ್ರೇಷ್ಠ

DVG-BJM.jpg
Published on

ದಾವಣಗೆರೆ  : ಭಾರತ ದೇಶದ ಸಂಸ್ಕೃತಿ ಪ್ರಪಂಚದಲ್ಲೇ ಶ್ರೇಷ್ಠವಾಗಿದ್ದು, ನಮ್ಮ ರಾಜ್ಯದ ಸಂಸ್ಕೃತಿಯಂತೂ ಪರಮ ಶ್ರೇಷ್ಠವಾಗಿದೆ. ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು ಎಂದು ಹಿರಿಯ ಪತ್ರಕರ್ತ ಡಾ. ಎಚ್.ಬಿ. ಮಂಜುನಾಥ ಹೇಳಿದರು.  ನಗರದ ಕೊಂಡಜ್ಜಿ ರಸ್ತೆಯ ಬಿಜೆಎಂ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಶ್ರೀ ಭುವನೇಶ್ವರಿ ಹಾಗೂ ನೆಹರೂ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.  ಕನ್ನಡದ ನೆಲದಲ್ಲಿ ವಾಸವಾಗಿದ್ದು, ಕನ್ನಡದ ಅನ್ನಾಹಾರ ಸೇವಿಸುವ ಎಲ್ಲರೂ ಕರ್ನಾಟಕದ ಸಂಸ್ಕೃತಿ ಮೈಗೂಡಿಸಿಕೊಳ್ಳಬೇಕು,  ಕನ್ನಡ ಭಾಷೆ ಬಳಸಬೇಕು, ಅನ್ಯ ಭಾಷೆಗಳನ್ನು ದ್ವೇಷಿಸಬಾರದು ಎಂದು ತಿಳಿಸಿದರು.  ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಬಡದಾಳ್ ಮಾತನಾಡಿ, ತಾಯಂದಿರು ಅತಿಯಾಗಿ ಟಿವಿ ಧಾರಾವಾಹಿಗಳ ವೀಕ್ಷಣೆಯಲ್ಲಿ ತೊಡಗದೆ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಬೇಕು. ನಮ್ಮ ಸಂಸ್ಕೃತಿ ಸಂಸ್ಕಾರ ತಿಳಿಸಬೇಕು ಎಂದರು.  ಸಾಧಕರ ಸಂದರ್ಶಕಿ ಅಶ್ವಿನಿ ಗೌಡ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಆರೋಗ್ಯಕರ ಬದಲಾವಣೆಗಳು ಶಾಲೆಯಲ್ಲಿ ಶಿಕ್ಷಕರಿಂದಲೂ ಹಾಗೂ ಮನೆಯಲ್ಲಿ ಪೋಷಕರಿಂದಲೂ ಆಗಬೇಕು ಎಂದು ಹೇಳಿದರು.  ಶಾಲಾ ಕಾರ್ಯದರ್ಶಿ ಕೆ.ಎಸ್. ಮಂಜುನಾಥ ಅಗಡಿ ಮಾತನಾಡಿ, ಮಾತೃಭಾಷೆ ಕನ್ನಡದೊಂದಿಗೆ ಹಿಂದಿ ಹಾಗೂ ಆಂಗ್ಲವನ್ನು ಕಲಿತರೆ ಒಳ್ಳೆಯದು ಎಂದು ತಿಳಿಸಿದರು.  ಹನುಮಂತಪ್ಪ ಇದ್ದರು. ಅಧ್ಯಾಪಕಿ ಗೀತಾಂಜಲಿ ಸ್ವಾಗತಿಸಿದರು. ಅರ್ಪಿತಾ ಶ್ರೀವಿದ್ಯಾ ನಿರೂಪಿಸಿದರು. ಶಿಕ್ಷಕಿ ಆಶಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಕ್ಕಳಿಂದ ವೈವಿಧ್ಯಮ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net