ಚಿರಂತನದಿಂದ ಥೈಲ್ಯಾಂಡ್‌ನಲ್ಲಿ ವಿಶ್ವ ಸಂಸ್ಕೃತಿ ಉತ್ಸವ

IMG-20230830-WA0121.jpg
Published on

ದಾವಣಗೆರೆ ಚಿರಂತನ ಸಂಸ್ಥೆಯಿಂದ ಬ್ಯಾಂಕಾಕ್‌ನ ರಾಜಮಂಗಳ ಯುನಿವರ್ಸಿಟಿ  ಹಾಲ್ನಲ್ಲಿ ಸೆ.3ರಂದು ವಿಶ್ವ ಸಂಸ್ಕೃತಿ ಉತ್ಸವ ಆಯೋಜಿಸಲಾಗಿದೆ.  
 ಥೈಲ್ಯಾಂಡ್‌ನಲ್ಲಿ ನಡೆಯಲಿರುವ ಈ ನೃತ್ಯ ಸಂಗೀತೋತ್ಸವಕ್ಕೆ ಭಾರತದಿಂದ 80ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಲಿದ್ದು ರಾಜ್ಯದ ದಾವಣಗೆರೆ, ತುಮಕೂರು, ಮೈಸೂರು ಹಾಗೂ ಬೆಂಗಳೂರಿನ ನೃತ್ಯ ತಂಡಗಳು ಪ್ರದರ್ಶನ ನೀಡಲಿವೆ.
 ಮೈಸೂರಿನ ನಿಮಿಷಾಂಬ ಸ್ಕೂಲ್ ಆಫ್ ಆರ್ಟ್ಸ್, ಬೆಂಗಳೂರಿನ ನೃತ್ಯ ದೇಗುಲ ಸಂಸ್ಥೆ, ತುಮಕೂರಿನ ನಿರ್ಮಲಾ ನಾಟ್ಯ ಕಲಾನಿಕೇತನ, ಮೈಸೂರಿನ ಸೌಮ್ಯ ನೃತ್ಯಶಾಲಾ ಹಾಗೂ ದಾವಣಗೆರೆ ಚಿರಂತನದ ಕಲಾವಿದರು ಭಾರತದ ವಿವಿಧ ಶಾಸ್ತ್ರೀಯ ಹಾಗೂ ಜಾನಪದ ಶೈಲಿಯ ನೃತ್ಯಗಳ ರಸದೌತಣ ಉಣ ಬಡಿಸಲಿದ್ದಾರೆ. ಥೈಲ್ಯಾಂಡ್‌ನ ಯೋವಾನತ್ತಸಿಲ್-ಥಾಯ್ ಡ್ಯಾನ್ಸ್ ಸ್ಕೂಲ್ನ ಕಲಾವಿದರು  ಥಾಯ್ ಶೈಲಿಯ ನೃತ್ಯ ಪ್ರದರ್ಶಿಸಲಿದ್ದಾರೆ.
 ಸೆ. 3ರಂದು ಸಂಜೆ 5.30ಕ್ಕೆ  ನಡೆಯಲಿರುವ ಕಾರ್ಯಕ್ರಮದಲ್ಲಿ ಸರಫ್ ಚೇರ್ಮನ್ ಸರಫ್ ಗ್ರೂಪ್ ಆಫ್ ಕಂಪನೀಸ್ ಬ್ಯಾಂಕಾಕ್ ಸುಶೀಲ್ ಕುಮಾರ್, ಬೆಂಗಳೂರಿನ ಪರಿಸರ ತಜ್ಞೆ ಲ.ರೇವತಿ ಕಾಮತ್, ಮಲೇಶಿಯನ್ ರಾಯಭಾರ ಕಚೇರಿಯ ಮಿಸ್ ಜರೀನ್, ಭಾರತೀಯ ರಾಯಭಾರ ಕಚೇರಿಯ ಡಾ. ಎಂ. ಸಿವಗಾರು, ಆರ್. ಮುತ್ತು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
 ಕಾರ್ಯಕ್ರಮದಲ್ಲಿ ಕಲಾವಿದರಿಗೆ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿ ನೀಡಲಾಗುತ್ತಿದೆ. ಚಿರಂತನದ ಈ ವಿಶೇಷ ಪ್ರಯತ್ನಕ್ಕೆ ಥೈಲ್ಯಾಂಡ್‌ನ ಸಂಸ್ಥೆಗಳಾದ ಥಾಯ್ ಕನ್ನಡ ಬಳಗ, ತೆಲುಗು ಅಸೋಸಿಯೇಷನ್ ಥೈಲ್ಯಾಂಡ್, ಥೈಲ್ಯಾಂಡ್ ತಮಿಳ್ ಫೆಡರೇಷನ್ ಕೈಜೋಡಿಸಿವೆ. ಸೆ. 1ರಂದು ಬೆಂಗಳೂರಿನಿಂದ ಥೈಲ್ಯಾಂಡಿಗೆ ಸುಮಾರು 170 ಜನರ ತಂಡವು ಪ್ರಯಾಣ ಬೆಳೆಸಲಿದೆ ಎಂದು ಸಂಸ್ಥೆಯ ಅಧ್ಯಕ್ಷೆ ದೀಪಾ ರಾವ್‌ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net