ಆರೋಪಿ ಬಂಧನ, 5 ಬೈಕ್ ವಶ

two-wheeler.jpg
Published on

ದಾವಣಗೆರೆ : ನಗರದ ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನವಾಗಿದ್ದ 5 ಬೈಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು ಆರೋಪಿಯನ್ನು ಬಂಧಿಸಿದ್ದಾರೆ.
 ದಾವಣಗೆರೆಯ ಶಾಹೀದ್ ಬಂಧಿತ ಆರೋಪಿ. ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮಗೊಂಡ ಬಸರಗಿ. ನಗರ ಉಪ-ವಿಭಾಗದ ಡಿವೈಎಸ್ಪಿ ಮಲ್ಲೇಶ ದೊಡ್ಡಮನಿ ಮಾರ್ಗದರ್ಶನಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಧನಂಜಯ ನೇತೃತ್ವದಲ್ಲಿ ಬಡಾವಣೆ ಪೊಲೀಸ್ ಠಾಣೆಯ ಪಿಎಸ್‌ಐ ಲತಾ ವಿ. ತಾಳೆಕರ್, ಸಿಬ್ಬಂದಿ ಧನಂಜಯ ರಾಜು ಅರಸು, ವಿಶ್ವಕುಮಾರ, ಸಿದ್ದೇಶ್, ಅರುಣ ಕುಮಾರ, ಸೈಯದ್ ಅಲಿ, ಹನುಮಂತಪ್ಪ, ಗೀತಾ ಎಚ್. ಕಾರ್ಯಾಚರಣೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net