ನಾಲ್ವರು ಅಂತಾರಾಜ್ಯ ಆರೋಪಿಗಳ ಬಂಧನ

dvg-acaused-arest-05-1.jpg
Published on

ದಾವಣಗೆರೆ : ಮನೆಕಳ್ಳತನ ಮಾಡುತ್ತಿದ್ದ ನಾಲ್ವರು ಅಂತಾರಾಜ್ಯ ಆರೋಪಿಗಳನ್ನು ಬಂಧಿಸಿರುವ ಇಲ್ಲಿನ ಕೆಟಿಜೆ ನಗರ ಠಾಣೆಯ ಪೊಲೀಸರು, 39.62 ಲಕ್ಷ ರೂ. ಮೌಲ್ಯದ 762 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
 ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕುಪ್ಪಿನಕೆರೆ ಗ್ರಾಮದ ಆಟೋ ಚಾಲಕ ರಾಜ ಅಲಿಯಾಸ್ ಪೋತರಾಜ್, ಚಿಕ್ಕಮಗಳೂರು ಜಿಲ್ಲೆ ಗಡಬನಹಳ್ಳಿ ಗ್ರಾಮದ ಮನು ಅಲಿಯಾಸ್ ಮನ್ಸೂರ್, ಅದೇ ಗ್ರಾಮದ ಎಚ್.ಎಲ್. ಜಗದೀಶ , ಎಚ್.ಎಲ್. ಗಿರೀಶ್ ಬಂಧಿತರು.
 ಕೆಟಿಜೆ ನಗರ ಠಾಣೆಯ 1 ಪ್ರಕರಣ, ಚಿಕ್ಕಮಗಳೂರು ನಗರದಲ್ಲಿ 2, ಹಾಸನದ 1, ಆಂಧ್ರ ಪ್ರದೇಶದ ಚಿತ್ತೂರು-2 ಟೌನ್ ಠಾಣೆಯಲ್ಲಿ ದಾಖಲಾದ 1 ಪ್ರಕರಣ ಪತ್ತೆಯಾಗಿವೆ.
 ನಗರ ಉಪ ವಿಭಾಗದ ಡಿವೈಎಸ್ಪಿ ಮಲ್ಲೇಶ ಡಿ, ರುದ್ರೇಶ ಎ.ಕೆ, ಪೊಲೀಸ್ ಇನ್ಸ್‌ಪೆಕ್ಟರ್ ಶಶಿಧರ ಯು.ಜೆ, ಪಿಎಸ್‌ಐ ಎನ್.ಆರ್. ಕಾಟೆ, ವಿಶ್ವನಾಥ ಜಿ.ಎನ್, ಮಂಜುನಾಥ ಕಲ್ಲೇದೇವರು ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.
 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net