

ದಾವಣಗೆರೆ : ದಾವಣಗೆರೆ ರೈಲ್ವೆ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿ 4 ಲಕ್ಷ ರೂ. ಮೌಲ್ಯದ 4 ಕೆಜಿ ತೂಕದ ಗಾಂಜಾ ಸೊಪ್ಪನ್ನು ವಶಪಡಿಸಿಕೊಂಡಿದ್ದಾರೆ. ಇಲ್ಲಿನ ಕೆಟಿಜೆ ನಗರದ ಹಣ್ಣಿನ ವ್ಯಾಪಾರಿ ಸೈಯದ್ ಅಫ್ರಿದಿ ಬಂಧಿತ ಆರೋಪಿ. ಇಲ್ಲಿನ ರೈಲು ನಿಲ್ದಾಣದಲ್ಲಿ ಬ್ಯಾಗಿನಲ್ಲಿ ಗಾಂಜಾವನ್ನು ಬೇರೆಡೆಗೆ ತೆಗೆದುಕೊಂಡು ಹೋಗಲು ಪ್ರಯತ್ನಿಸುವಾಗ ಸಿಕ್ಕಿ ಬಿದ್ದಿದ್ದಾನೆ. ರೈಲ್ವೇಸ್ ಡಿಐಜಿಪಿ ಡಾ. ಎಸ್.ಡಿ. ಶರಣಪ್ಪ, ಎಸ್ಪಿ ಎಸ್.ಕೆ. ಸೌಮ್ಯಲತಾ, ಬೆಂಗಳೂರು ಉಪ ವಿಭಾಗದ ಡಿವೈಎಸ್ಪಿ ರವಿಕುಮಾರ್ ಮಾರ್ಗದರ್ಶನದಲ್ಲಿ, ತನಿಖಾಧಿಕಾರಿ ಶಿವಪ್ಪ ವೈ. ಮರಡಿ, ಪೊಲೀಸ್ ಇನ್‌ಸ್ಪೆಕ್ಟರ್ ಸಂತೋಷ್ ಎಂ. ಪಾಟೀಲ್ ನೇತೃತ್ವದಲ್ಲಿ ಎಎಸ್‌ಐ ಜಿ. ನಾಗರಾಜು, ಎನ್.ಆರ್. ರವಿ, ಸಿ.ಪಿ. ದಿನೇಶ್, ಟಿ.ಆರ್. ಚೇತನ್, ಮಂಜುನಾಥ್ ಭೋವಿ, ಬಿ.ಎನ್. ಚೇತನ್ ಕಾರ್ಯಾಚರಣೆ ನಡೆಸಿದರು. ದಾವಣಗೆರೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.