ಶಾಸಕ ಹರೀಶ್ ನಿವಾಸಕ್ಕೆ ಪೊಲೀಸರ ಭೇಟಿ

Crime_20250904001201671.jpg
Published on

ದಾವಣಗೆರೆ : ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲು ಪೊಲೀಸರು ಬುಧವಾರ ರಾತ್ರಿ, ಇಲ್ಲಿನ ವಿಶ್ವೇಶ್ವರಯ್ಯ ಉದ್ಯಾನದ ಬಳಿಯ ಹರಿಹರ ಶಾಸಕ ಬಿ.ಪಿ. ಹರೀಶ್ ಅವರ ನಿವಾಸಕ್ಕೆ ತೆರಳಿದ್ದರು.  ಈ ವೇಳೆ ಶಾಸಕರು ಮನೆಯಲ್ಲಿ ಇರಲಿಲ್ಲ. ಶಾಸಕರ ಪತ್ನಿ ಹಾಗೂ ಪುತ್ರ ಇದ್ದರು. ಶಾಸಕರು ಬೆಂಗಳೂರು ಪ್ರವಾಸದಲ್ಲಿದ್ದಾರೆ ಎಂಬ ಮಾಹಿತಿ ಪಡೆದ ಪೊಲೀಸರು, ವಿಚಾರಣೆಗೆ ಠಾಣೆಗೆ ಬರುವಂತೆ ತಿಳಿಸಿದ್ದಾರೆ.  ಮತ್ತೊಂದೆಡೆ ಶಾಸಕರ ಮನೆಯ ಸುತ್ತ ಕೆಲವರು ಅನುಮಾನಾಸ್ಪದ ರೀತಿಯಲ್ಲಿ ಸುಳಿದಾಡುತ್ತಿರುವುದನ್ನು ಗಮನಿಸಿದ ಬಡಾವಣೆ ಠಾಣೆಯ ಪೊಲೀಸರು ಭದ್ರತೆಯ ಅಗತ್ಯವಿದೆಯೇ ಎಂಬುದಾಗಿ ಪ್ರಶ್ನಿಸಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.    

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net