

ದಾವಣಗೆರೆ : ದಾವಣಗೆರೆ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯ ಚಳಗೇರಿ ಮತ್ತು ರಾಣೇಬೆನ್ನೂರು ರೈಲು ನಿಲ್ದಾಣಗಳ ಮಧ್ಯೆ 55 ರಿಂದ 60 ವರ್ಷದ ಅಪರಿಚಿತ ಪುರುಷ ರೈಲಿನಿಂದ ಬಿದ್ದು ಮೃತಪಟ್ಟಿದ್ದಾರೆ. ಕಪ್ಪು ಮೈಬಣ್ಣ, ಸಾಧಾರಣ ಶರೀರ, ದುಂಡು ಮುಖ, ಸುಮಾರು 5.6 ಅಡಿ ಎತ್ತರ, ಕುರುಚಲು ಬಿಳಿ ಗಡ್ಡ, ಮೀಸೆ ಇದೆ. ಬಾದಾಮಿ ಬಣ್ಣದ (ಕ್ರೀಮ್ ಕಲರ್) ತುಂಬು ತೋಳಿನ ಅಂಗಿ, ಕಪ್ಪು ಬಣ್ಣದ ಪ್ಯಾಂಟ್ ಇದೆ. ಮೃತ ದೇಹವನ್ನು ದಾವಣಗೆರೆಯ ಚಿಗಟೇರಿ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ. ವಾರಸುದಾರರು ದಾವಣಗೆರೆ ರೈಲ್ವೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಕೋರಲಾಗಿದೆ.