ಇಬ್ಬರು ಮಹಿಳೆಯರ ಬಂಧನ, ಚಿನ್ನಾಭರಣ ವಶ

Crime_20250709001802143.jpg
Published on

ದಾವಣಗೆರೆ  : ಬಸ್ ನಿಲ್ದಾಣದಲ್ಲಿ ಕಳ್ಳತನ ಮಾಡುತ್ತಿದ್ದ ಇಬ್ಬರು ಮಹಿಳೆಯರನ್ನು ಕೆ.ಟಿ.ಜೆ ನಗರ ಠಾಣೆ ಪೊಲೀಸರು ಬಂಧಿಸಿ 15 ಲಕ್ಷ ರೂ. ಬೆಲೆ ಬಾಳುವ 155 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.  ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕು ದೊಡ್ಡಘಟ್ಟ ಗ್ರಾಮದ ಆರ್. ಮಂಜುಳಾ ಮತ್ತು ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆಯ ಟಿ. ಪೂರ್ಣಿಮಾ ಬಂಧಿತ ಆರೋಪಿಗಳು. ಇವರ ಮೇಲೆ ದಾವಣಗೆರೆ ರೈಲ್ವೆ ಪೊಲೀಸ್ ಠಾಣೆ, ಚಿತ್ರದುರ್ಗ ಕೋಟೆ ಠಾಣೆ, ಹೊಳಲ್ಕೆರೆ ಠಾಣೆ ಹಾಗೂ ದಾವಣಗೆರೆ ಬಡಾವಣೆ ಠಾಣೆಯಲ್ಲಿ ತಲಾ 1 ಕಳ್ಳತನ ಪ್ರಕರಣಗಳಿವೆ.  ಕೆಟಿಜೆ ನಗರ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಸುನೀಲ್ ಕುಮಾರ್ ಎಚ್.ಎಸ್., ಪಿ.ಎಸ್.ಐ ಲತಾ.ಆರ್., ಹಾಗೂ ಸಿಬ್ಬಂದಿ ಸುರೇಶ್ ಬಾಬು, ಮಹಮದ್ ರಫಿ, ಗಿರೀಶ್ ಗೌಡ, ಸಿದ್ದಪ್ಪ, ನಾಗರಾಜ, ಮಂಜಪ್ಪ. ಮಾರುತಿ, ಗೌರಮ್ಮ, ಗೀತಾ.ಸಿ.ಕೆ, ಭಾವನ ಬೆಳ್ಳೂಡಿ, ಮಮತಾ, ಅನಿತಾ, ಅಮರೇಶ ಸಂಗಮ, ಸೋಮಪ್ಪ .ಆರ್, ಹಾಗೂ ಜಿಲ್ಲಾ ಪೊಲೀಸ್ ಕಚೇರಿಯ ರಮೇಶ್, ಸಿದ್ಧಾರ್ಥ ಕಾರ್ಯಾಚರಣೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net