ಮನೆಗಳ್ಳತನ ಆರೋಪಿಗಳ ಬಂಧನ, ಆಭರಣ ವಶ

dvg-arest.jpg
Published on

ದಾವಣಗೆರೆ : ಇಲ್ಲಿನ ವಿದ್ಯಾನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಮನೆಗಳ್ಳತನ ಪ್ರಕರಣದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ ಅವರಿಂದ 7.30 ಲಕ್ಷ ರೂ. ಬೆಲೆ ಬಾಳುವ ಚಿನ್ನ ಹಾಗೂ ಬೆಳ್ಳಿ ಆಭರಣ ವಶಪಡಿಸಿಕೊಂಡಿದ್ದಾರೆ.  ಇಲ್ಲಿನ ಶಾಂತಿ ನಗರದ ಪ್ರದೀಪ್ ಅಲಿಯಾಸ್ ಕರಿಯಾ, ನಿಜಲಿಂಗಪ್ಪ ಬಡಾವಣೆಯ ಮಣಿಕಂಠ ಮತ್ತು ಯಲ್ಲಮ್ಮ ನಗರದ ಎನ್. ಸಂಜಯ ಬಂಧಿತರು. ಕೆಟಿಜೆ ನಗರ ಪೊಲೀಸ್ ಠಾಣೆಯ ಪ್ರಕರಣಗಳಲ್ಲಿ ಇನ್ನೂ ಇಬ್ಬರು ಆರೋಪಿತರು ತಲೆ ಮರೆಸಿಕೊಂಡಿದ್ದಾರೆ.  ಆರೋಪಿಗಳಿಂದ ವಿದ್ಯಾನಗರ ಹಾಗೂ ಕೆಟಿಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ 3 ಪ್ರಕರಣಗಳ ಸಂಬಂಧ ಒಟ್ಟು 7 ಲಕ್ಷ ರೂ. ಬೆಲೆಯ 87 ಗ್ರಾಂ. ತೂಕದ ಬಂಗಾರದ ಆಭರಣ, 30 ಸಾವಿರ ರೂ. ಬೆಲೆಯ 404 ಗ್ರಾಂ ತೂಕದ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿತರು ನ್ಯಾಯಾಂಗ ಬಂಧನದಲ್ಲಿದ್ದಾರೆ.  ನಗರದ ಮಹಾಂತೇಶ ಎಂಬುವರು ವಿದ್ಯಾನಗರ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಆರೋಪಿಗಳ ಪತ್ತೆಗಾಗಿ ತಂಡವನ್ನು ರಚಿಸಲಾಗಿತ್ತು.  ವಿದ್ಯಾನಗರ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ವೈ.ಎಸ್. ಶಿಲ್ಪಾ, ಜಿಲ್ಲಾ ಪೊಲೀಸ್ ಕಚೇರಿಯ ಪೊಲೀಸ್ ಇನ್ಸ್‌ಪೆಕ್ಟರ್ ಬಿ. ಇಸ್ಮಾಯಿಲ್, ಪಿಎಸ್‌ಐಗಳಾದ ಜಿ.ಎನ್. ವಿಶ್ವನಾಥ, ವಿಜಯ, ಮಂಜುನಾಥ ಕಲ್ಲೇದೇವರು ಹಾಗೂ ಸಿಬ್ಬಂದಿ ಶಂಕರ್ ಜಾಧವ, ಎಂ. ಆನಂದ, ಚಂದ್ರಪ್ಪ, ಬಸವರಾಜ, ಬೋಜಪ್ಪ, ಗುಡ್ಡಪ್ಪ, ಆಕಾಶ, ಬಸವರಾಜ, ರಾಮಚಂದ್ರಪ್ಪ, ಸೀಮಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net