ವಿಶ್ವಕಪ್ ಗೆದ್ದು ಬಾ ಭಾರತ

dvg-india-18.jpg
Published on

ದಾವಣಗೆರೆ : ಭಾನುವಾರ ನಡೆಯಲಿರುವ ವಿಶ್ವಕಪ್ ಕ್ರಿಕೆಟ್ ಮಹಾ ಸಮರದಲ್ಲಿ ಭಾರತ ಜಯ ಗಳಿಸಲಿ ಎಂದು ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಸೇರಿ ಕ್ರಿಕೆಟ್ ಅಭಿಮಾನಿಗಳು ಶುಭ ಹಾರೈಸಿದ್ದಾರೆ.
 ನಗರದಲ್ಲಿ ಶನಿವಾರ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿದ ನಂತರ ಶಾಮನೂರು ಶಿವಶಂಕರಪ್ಪ, ಮೇಯರ್ ವಿನಾಯಕ ಪೈಲ್ವಾನ್, ಮುಖಂಡರಾದ ದಿನೇಶ್ ಕೆ. ಶೆಟ್ಟಿ, ಅಯೂಬ್ ಪೈಲ್ವಾನ್, ಆನಂದಪ್ಪ ಇತರರು ರಾಷ್ಟ್ರಧ್ವಜ ಮತ್ತು ಪೋಸ್ಟರ್ ಹಿಡಿದು ತಂಡಕ್ಕೆ ಶುಭ ಕೋರಿದರು.
 ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಕ್ರೀಡಾಪಟುಗಳ ಸಂಘದಿಂದ ಭಾರತ ತಂಡಕ್ಕೆ ಶುಭ ಕೋರಲಾಯಿತು. ಮಹಾನಗರ ಪಾಲಿಕೆ ಸದಸ್ಯ ಎ. ನಾಗರಾಜ್, ಜಯಪ್ರಕಾಶ್ ಗೌಡ, ರೂಪಿತ್, ನಾಗರಾಜ್, ಯುವರಾಜ್ ಮತ್ತು ಕ್ರಿಕೆಟ್ ಆಟಗಾರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net