ಮೂರು ದಿನಗಳಲ್ಲಿ 22ಕ್ಕೂ ಹೆಚ್ಚು ಮಂದಿಗೆ ಗಾಯ

Crime_20251023221656448.jpg
Published on

ದಾವಣಗೆರೆ :  ಬೆಳಕಿನ ಹಬ್ಬ ದೀಪಾವಳಿಯಲ್ಲಿ ಪಟಾಕಿ ಸಿಡಿದು ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಲ್ಲಿ 22ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.  ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ 21 ರಂದು ಇಬ್ಬರು, ಬುಧವಾರ 5 ಜನ ಹಾಗೂ ಗುರುವಾರ ಒಬ್ಬರು ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ. ಇವರು ದಾವಣಗೆರೆ ನಗರದವರೇ ಆಗಿದ್ದು ಅವರಲ್ಲಿ ಐವರು ಮಕ್ಕಳಿದ್ದಾರೆ. ಇಬ್ಬರು ಮಕ್ಕಳ ಕಣ್ಣಿಗೆ, ಉಳಿದವರ ಕೈಗಳಿಗೆ ಸುಟ್ಟ ಗಾಯಗಳಾಗಿವೆ. ಯಾರೂ ಒಳ ರೋಗಿಗಳಾಗಿ ದಾಖಲಾಗಿಲ್ಲ ಎಂದು ಆಸ್ಪತ್ರೆಯ ಆರ್‌ಎಂಒ ಡಾ. ನಾಗವೇಣಿ ಮಾಹಿತಿ ನೀಡಿದರು.  ಪಟಾಕಿ ಸಿಡಿದು ಗಾಯಗೊಂಡ 14 ಜನ ಜಿಲ್ಲೆಯ ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ. ಗಂಭೀರ ಪ್ರಕರಣಗಳು ಯಾವುದೂ ಇಲ್ಲ, ಒಳ ರೋಗಿಗಳಾಗಿ ಯಾರೂ ದಾಖಲಾಗಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಷಣ್ಮುಖಪ್ಪ ತಿಳಿಸಿದರು. ನಗರದ ಕೆಲವು ಖಾಸಗಿ ಆಸ್ಪತ್ರೆಗಳಲ್ಲೂ ಹಲವರು ಚಿಕಿತ್ಸೆ ಪಡೆದಿದ್ದು ಆ ಮಾಹಿತಿ ಲಭ್ಯವಾಗಿಲ್ಲ.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net