ಫಲಾನುಭವಿಗಳಿಗೆ ಹಸು ವಿತರಣೆ

hasu.jpg
Published on

 ದಾವಣಗೆರೆ : ಕೃಷಿ ಇಲಾಖೆ, ದಾವಣಗೆರೆ ತಾಲೂಕಿನ 2023-24ನೇ ಸಾಲಿನ ಆರ್.ಕೆ.ವಿ.ವೈ-ರಫ್ತಾರ್ ಯೋಜನೆ, ಜಾನುವಾರು ಆಧಾರಿತ ಸಮಗ್ರ ಕೃಷಿ ಪದ್ಧತಿ ಯೋಜನೆಯಡಿ ಹಸು ವಿತರಣೆ ಕಾರ್ಯಕ್ರಮವನ್ನು ಸಚಿವ ಮಲ್ಲಿಕಾರ್ಜುನ್ ನಿವಾಸದ ಬಳಿ ಶುಕ್ರವಾರ ಆಯೋಜಿಸಲಾಗಿತ್ತು.
 ಸಚಿವರು ಕಡ್ಲೇಬಾಳು ಮತ್ತು ಕಕ್ಕರಗೊಳ್ಳ ಗ್ರಾಮ ಪಂಚಾಯಿತಿ ಫಲಾನುಭವಿಗಳಿಗೆ ಹಸುಗಳನ್ನು ಹಸ್ತಾಂತರಿಸಿದರು. ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್, ಜಿ.ಪಂ. ಸಿಇಒ ಸುರೇಶ್ ಇಟ್ನಾಳ್, ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್, ಉಪ ನಿರ್ದೇಶಕ ಆರ್. ತಿಪ್ಪೇಸ್ವಾಮಿ, ಸಹಾಯಕ ನಿರ್ದೇಶಕ ಡಿ.ಎಂ. ಶ್ರೀಧರಮೂರ್ತಿ, ತಹಸೀಲ್ದಾರ್ ಡಾ.ಎಂ.ಬಿ. ಅಶ್ವಥ್, ಪಶು ವೈದ್ಯಕೀಯ ಇಲಾಖೆ ಉಪ ನಿರ್ದೇಶಕ ಡಾ.ಚಂದ್ರಶೇಖರ್ ಸುಂಕದ್, ಪಶು ವೈದ್ಯಾಧಿಕಾರಿ ಡಾ. ಸತೀಶ್, ಮುಖಂಡರಾದ ಪರಶುರಾಮ್, ಮುದೇಗೌಡ್ರು ಗಿರೀಶ್, ಕರಿಬಸಪ್ಪ, ಗಿರೀಶ್ ಗೌಡ್ರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net