2.49 ಲಕ್ಷ ವ್ಯಾಜ್ಯಪೂರ್ವ, 7,944 ಜಾರಿಯಲ್ಲಿರುವ ಕೇಸ್ ಮುಕ್ತಾಯ

c.jpg
Published on

ದಾವಣಗೆರೆ : ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 2,49,729 ವ್ಯಾಜ್ಯಪೂರ್ವ ಪ್ರಕರಣಗಳು ಮುಕ್ತಾಯಗೊಂಡು 104.20 ಕೋಟಿ ರೂ. 7,944 ಜಾರಿಯಲ್ಲಿರುವ ಪ್ರಕರಣಗಳು ಮುಕ್ತಾಯಗೊಂಡು 18.37 ಕೋಟಿ ರೂ. ಪರಿಹಾರವಾಗಿ ರಾಜಿ ಮೂಲಕ ಮುಕ್ತಾಯಗೊಂಡಿವೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರಣ್ಣವರ ತಿಳಿಸಿದ್ದಾರೆ.  ಈ ಪ್ರಕರಣಗಳಲ್ಲಿ 139 ಅಪರಾಧಿಕ, 220 ಚೆಕ್ ಅಮಾನ್ಯ, 14 ಬ್ಯಾಂಕ್ ವಸೂಲಾತಿ, 23 ಇತರೆ ಹಣ ವಸೂಲಾತಿ, 41 ಅಪಘಾತ, 102 ವಿದ್ಯುತ್ ಕಳ್ಳತನ, 16 ಅಕ್ರಮ ಮರಳು ಗಣಿಗಾರಿಕೆ ಪ್ರಕರಣಗಳು ಇತ್ಯರ್ಥವಾಗಿವೆ.  ಪಾಲು ವಿಭಾಗಕ್ಕಾಗಿ ದಾಖಲಿಸಿದ 49 ದಾವೆಗಳು, 187 ಜಾರಿ ಅರ್ಜಿಗಳು, ಹಲವು ಕಾರಣಕ್ಕಾಗಿ ದಾಖಲಿಸಿದ 60 ದಾವೆಗಳು, ಜೀವನಾಂಶ ಕೋರಿ ದಾಖಲಿಸಿದ್ದ 41 ದಾವೆಗಳು ರಾಜಿ ಮೂಲಕ ಇತ್ಯರ್ಥಗೊಂಡಿವೆ.  ಜಿಲೆಯಾದ್ಯಂತ 1,132 ಕ್ಕಿಂತ ಹೆಚ್ಚು ಶಾಲಾ ವಿದ್ಯಾರ್ಥಿಗಳ ಜನನ ಪ್ರಮಾಣ ಪತ್ರಗಳ ಕುರಿತು ಕಂದಾಯ ಇಲಾಖೆ ಮತ್ತು ಮಹಾನಗರ ಪಾಲಿಕೆಯ ಅಧಿಕಾರಿಗಳು ರಾಜಿ ಮಾಡಿಕೊಳ್ಳುವ ಮೂಲಕ ವಿದ್ಯಾರ್ಥಿ ವೇತನ, ಇತರೆ ಅನುಕೂಲತೆಗಳಿಗೆ ಅನುವು ಮಾಡಿಕೊಟ್ಟಂತಾಗಿದೆ.  ಜಿಲ್ಲೆಯ ಮಹಾನಗರ ಪಾಲಿಕೆ, ಎಲ್ಲ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದಂತೆ 82,498 ಪ್ರಕರಣಗಳು ಮುಕ್ತಾಯಗೊಂಡು ಸರ್ಕಾರಕ್ಕೆ 29.79 ಕೋಟಿ ರೂ. ಆಸ್ತಿ ತೆರಿಗೆ ಸಂದಾಯವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net