ದಾವಣಗೆರೆಯಲ್ಲಿ ಮತಗಳ ಎಣಿಕೆಗೆ ಸಕಲ ಸಿದ್ಧತೆ

davanagere, counting, preperation,
dc-1.jpg
Published on

ದಾವಣಗೆರೆ: ಜಿಲ್ಲೆಯ ಏಳೂ ಕ್ಷೇತ್ರಗಳ ಮತಗಳ ಎಣಿಕೆ ಕಾರ್ಯ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಶನಿವಾರ ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದ್ದು ಮಧ್ಯಾಹ್ನದ ವೇಳೆಗೆ ಫಲಿತಾಂಶ ಲಭ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹೇಳಿದರು.
 ಶಿವಗಂಗೋತ್ರಿ ಆವರಣದ ಎಣಿಕೆ ಕೇಂದ್ರದ ಪರಿಶೀಲನೆ ನಡೆಸಿ ಸಿದ್ಧತೆಗಳ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದರು.
 ಎಣಿಕೆ ಕಾರ್ಯಕ್ಕೆ ಸಿದ್ಧತೆಗಳು ಪೂರ್ಣಗೊಂಡಿವೆ. ವಿವಿ ಆವರಣದ ನಾಲೆಜ್ ಬ್ಲಾಕ್‌ನಲ್ಲಿ ದಾವಣಗೆರೆ ಉತ್ತರ, ಮಾಯಕೊಂಡ, ಜಗಳೂರು ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ. ಸೋಷಿಯಲ್ ಬ್ಲಾಕ್‌ನಲ್ಲಿ ಚನ್ನಗಿರಿ ಮತ್ತು ಹೊನ್ನಾಳಿಯ ಮತಗಳ ಎಣಿಕೆಯಾಗಲಿದೆ. ಸೈನ್ಸ್ ಬ್ಲಾಕ್‌ನಲ್ಲಿ ದಾವಣಗೆರೆ ದಕ್ಷಿಣ, ಹರಿಹರ ಕ್ಷೇತ್ರಗಳ ಮತಗಳ ಎಣಿಕೆ ಕಾರ್ಯಕ್ಕೆ ವ್ಯವಸ್ಥೆಯಾಗಿದೆ.
 ಕ್ಷೇತ್ರಕ್ಕೆ ಒಂದರಂತೆ 7 ಕೊಠಡಿಗಳಲ್ಲಿ ಮತ ಎಣಿಕೆ ನಡೆಯಲಿದೆ. ಪ್ರತಿ ಕೊಠಡಿಯಲ್ಲಿ 14 ಟೇಬಲ್‌ಗಳನ್ನು ಹಾಕಲಾಗಿದೆ. ಮೈಕ್ರೋ ಆಬ್ಸರ್‌ವರ್, ಎಣಿಕೆ ಮೇಲ್ವಿಚಾರಕ, ಎಣಿಕೆ ಸಹಾಯಕರು ಇರುವರು.
 ಬೆಳಗ್ಗೆ 8 ಗಂಟೆಗೆ ಪೋಸ್ಟಲ್ ಬ್ಯಾಲೆಟ್ಗಳ ಎಣಿಕೆ ನಡೆಯಲಿದೆ. 8.30ಕ್ಕೆ ವಿದ್ಯುನ್ಮಾನ ಯಂತ್ರಗಳ ಮತ ಎಣಿಕೆ ಕಾರ್ಯ ಆರಂಭವಾಗಲಿದೆ. 7 ಕ್ಷೇತ್ರಗಳಿಂದ 98 ಟೇಬಲ್ಗಳಲ್ಲಿ ಎಣಿಕೆ ನಡೆಯಲಿದ್ದು 196 ಎಣಿಕೆ ಸಿಬ್ಬಂದಿ, 105 ಮೈಕ್ರೋ ಆಬ್ಸರ್‌ವರ್‌ಗಳಿರುವರು. ಅಂಚೆ ಮತ ಎಣಿಕೆಗೆ 24 ಟೇಬಲ್ಗಳಿಗೆ 72 ಸಿಬ್ಬಂದಿ, 24 ಮೈಕ್ರೋ ಆಬ್ಸರ್‌ವರ್, ಸೇವಾ ಮತದಾರರ ಮತ ಎಣಿಕೆಗೆ ಪ್ರತಿ ಕ್ಷೇತ್ರಕ್ಕೆ ಒಂದು ಟೇಬಲ್ ಇರಲಿದ್ದು ಒಟ್ಟು 28 ಸಿಬ್ಬಂದಿಯನ್ನು ಹೆಚ್ಚುವರಿಯಾಗಿ ಎಣಿಕೆಗೆ ಮೀಸಲಿರಿಸಲಾಗಿದೆ.
 ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net