ಭದ್ರಾ ಜಲಾಶಯಕ್ಕೆ ಪಾಲಿಕೆ ಸದಸ್ಯರ ಬಾಗಿನ

Davangere, Corporation, Congress, Bhadra Reservoir, Bagina,
Published on

ದಾವಣಗೆರೆ: ವರುಣನ ಕೃಪೆಯಿಂದ ತುಂಬಿ ಹರಿಯುತ್ತಿರುವ ದಾವಣಗೆರೆ ಜಿಲ್ಲೆ ಜನರ ಜೀವನಾಡಿ ಆಗಿರುವ ಭದ್ರಾ ಜಲಾಶಯಕ್ಕೆ ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯರು ಗುರುವಾರ ಬಾಗಿನ ಅರ್ಪಿಸಿದರು.

ಭದ್ರಾ ಜಲಾಶಯ ಭರ್ತಿಯಾಗಿ ಜಿಲ್ಲೆಯ ಹೊನ್ನಾಳಿ-ಹರಿಹರ ಭಾಗದಲ್ಲಿ ತುಂಗಭದ್ರಾ ನದಿ ತುಂಬಿ ಹರಿಯುತ್ತಿದ್ದು, ರೈತರಲ್ಲಿ ಸಂತಸ ಮೂಡಿದೆ ಎಂದು ಪಾಲಿಕೆ ವಿಪಕ್ಷ ನಾಯಕ ಜಿ.ಎಸ್.ಮಂಜುನಾಥ್ ಹೇಳಿದರು.

ಡ್ಯಾಂನಿಂದ ದಾವಣಗೆರೆ ನಗರಕ್ಕೆ ಕುಡಿಯುವ ನೀರು ಪೂರೈಕೆ ಆಗುತ್ತಿದ್ದು, ಇದನ್ನು ಆಡಳಿತ ಪಕ್ಷ ಬಿಜೆಪಿ ಸಮರ್ಪಕವಾಗಿ ಬಳಸಿಕೊಳ್ಳಬೇಕಿದೆ ಎಂದ ಅವರು, ಕೆರೆಗಳ ಅಭಿವೃದ್ಧಿ ಹೆಸರಿನಲ್ಲಿ ಅವನ್ನು ಖಾಲಿ ಮಾಡಿ ಜನತೆಗೆ ಸಮರ್ಪಕ ನೀರು ಸರಬರಾಜು ಮಾಡುವಲ್ಲಿ ಪಾಲಿಕೆ ಆಡಳಿತ ವಿಫಲವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಪಾಲಿಕೆ ಸದಸ್ಯ ಎ.ನಾಗರಾಜ್, ಸ್ಥಾಯಿ ಸಮಿತಿ ಅಧ್ಯಕ್ಷ ಉದಯ್ ಕುಮಾರ್, ಸದಸ್ಯರಾದ ಜಿ.ಡಿ.ಪ್ರಕಾಶ್, ಎ.ಬಿ.ರಹೀಂ, ಮಹ್ಮದ್ ಕಬೀರ್ ಅಲಿ, ಸುಧಾ ಇಟ್ಟಿಗುಡಿ ಮಂಜುನಾಥ್, ವಿನಾಯಕ ಪೈಲ್ವಾನ್, ಜಾಕಿರ್ ಅಲಿ, ಮಹ್ಮದ್ ಸೈಯದ್ ಚಾರ್ಲಿ, ಹುರ್ ಬಾನು (ಪಂಡಿತ್) ಕೆ.ಚಮನ್ ಸಾಬ್, ಆಶಾ ಡಿ.ಎಸ್.ಉಮೇಶ್, ಮೀನಾಕ್ಷಿ ಜಗದೀಶ್, ಶಿವಲೀಲಾ ಕೊಟ್ರಯ್ಯ, ಅಬ್ದುಲ್ ಲತೀಫ್, ಪಾಮೇನಹಳ್ಳಿ ನಾಗರಾಜು, ಕೆ.ಎಸ್.ಸವಿತಾ, ಗಣೇಶ್ ಹುಲ್ಮನಿ, ನಾಗರತ್ನಮ್ಮ ಕೃಷ್ಣಪ್ಪ, ಕಲ್ಲಳ್ಳಿ ನಾಗರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net