ಮೇಯರ್ ಬಿಸಿಎ, ಉಪ ಮೇಯರ್ ಬಿಸಿಬಿ

MAHANAGARA-PALIKE-OFFICE-dvg.jpg
Published on

ದಾವಣಗೆರೆ : ದಾವಣಗೆರೆ ಮಹಾನಗರ ಪಾಲಿಕೆಯ ಮೇಯರ್ ಸ್ಥಾನವನ್ನು ಹಿಂದುಳಿದ ವರ್ಗ ‘ಎ’, ಉಪ ಮೇಯರ್ ಸ್ಥಾನವನ್ನು ಹಿಂದುಳಿದ ವರ್ಗ ‘ಬಿ’ ಗೆ ಮೀಸಲಾತಿ ಮಾಡಿ ರಾಜ್ಯ ಸರ್ಕಾರ ಸೋಮವಾರ ಅಧಿಸೂಚನೆ ಹೊರಡಿಸಿದೆ.  ಒಟ್ಟು 45 ಸದಸ್ಯ ಬಲದ ಪಾಲಿಕೆಯಲ್ಲಿ ಕಾಂಗ್ರೆಸ್ ಆಡಳಿತ ನಡೆಸುತ್ತಿದೆ. ಹಾಲಿ ಮೇಯರ್ ವಿನಾಯಕ ಪೈಲ್ವಾನ್ ಹಾಗೂ ಉಪ ಮೇಯರ್ ಯಶೋದಾ (ಬಿಜೆಪಿ) ಅವರ ಅಧಿಕಾರ ಅವಧಿ ಮಾರ್ಚ್ 17ಕ್ಕೆ ಮುಕ್ತಾಯವಾಗಿತ್ತು. ಮೀಸಲಾತಿ ಘೋಷಣೆ ವಿಳಂಬವಾಗಿದ್ದರಿಂದ ಆ ಸ್ಥಾನದಲ್ಲಿ ಅವರೇ ಮುಂದುವರಿದಿದ್ದರು.  ಹೊಸ ಮೀಸಲಾತಿ ಅಡಿ ಕಾಂಗ್ರೆಸ್‌ನಲ್ಲಿ ಮೇಯರ್ ಸ್ಥಾನಕ್ಕೆ 7 ಜನ, ಉಪ ಮೇಯರ್ ಸ್ಥಾನಕ್ಕೆ ಇಬ್ಬರು ಪೈಪೋಟಿ ನಡೆಸುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net