

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರ ನಿಯೋಗ ಮೇಯರ್ ಬಿ.ಎಚ್. ವಿನಾಯಕ್ ನೇತೃತ್ವದಲ್ಲಿ ಆಂಧ್ರ ಪ್ರದೇಶದ ವಿಶಾಖಪಟ್ಟಣಕ್ಕೆ ಅ. 3ರಿಂದ 6ರ ವರೆಗೆ ಭೇಟಿ ನೀಡಿ ಅಲ್ಲಿ ಅನುಷ್ಠಾನಗೊಳಿಸಿರುವ ವಿವಿಧ ಯೋಜನೆಗಳನ್ನು ವೀಕ್ಷಿಸಿತು.
ನಿಯೋಗವು ಗ್ರೇಟರ್ ವಿಶಾಖಪಟ್ಟಣಂ ವತಿಯಿಂದ ಅನುಷ್ಠಾನಗೊಳಿಸಲಾಗಿರುವ 24*7 ಜಲಸಿರಿ ಯೋಜನೆಯನ್ನು ಸದಸ್ಯರು ವೀಕ್ಷಿಸಿದರು. ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಮತ್ತು ಸ್ವಾಪಿಂಗ್ ಕೇಂದ್ರ, ಬೀಚ್ ರಸ್ತೆ, ಆಟೊ ಉಚಿತ ಸೇವೆ ಮತ್ತು ನೀರು ಸರಬರಾಜು ಘಟಕಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿದರು.
ವಿಶಾಖಪಟ್ಟಣಂ ಮೇಯರ್ ಗೋಲಗಾನಿ ಹರಿ ವೆಂಕಟಕುಮಾರಿ, ಉಪ ಮೇಯರ್ ಜಿಯ್ಯನಿ ಶ್ರೀಧರ್ ಹಾಗೂ ಮಹಾನಗರ ಪಾಲಿಕೆ ಆಡಳಿತ ಪಕ್ಷದ ನಾಯಕ ಬಾನಲ ಶ್ರೀನು ಹಾಗೂ ಇತರರು ದಾವಣಗೆರೆಯ ತಂಡವನ್ನು ಸನ್ಮಾನಿಸಿದರು.
ಉಪ ಮೇಯರ್ ಯಶೋದಾ ಯಗ್ಗಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಬ್ದುಲ್ ಲತೀಫ್, ಮೀನಾಕ್ಷಿ ಜಗದೀಶ್, ಪ್ರತಿಪಕ್ಷ ನಾಯಕ ಪ್ರಸನ್ನ ಕುಮಾರ್ ಹಾಗೂ ಸದಸ್ಯರು ಇದ್ದರು.