

ದಾವಣಗೆರೆ : ಜಿಲ್ಲೆಯ ಸೌಹಾರ್ದ ಸಹಕಾರಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು ಹಾಗೂ ಮುಖ್ಯ ಕಾರ್ಯ ನಿರ್ವಾಹಕರಿಗಾಗಿ ಸಂಪರ್ಕ ಸಭೆ ಮತ್ತು ವಿಷಯಾಧಾರಿತ ತರಬೇತಿ ಕಾರ್ಯಕ್ರಮವನ್ನು ನಗರದ ಶ್ರೀಗಂಧ ರೆಸಿಡೆನ್ಸಿಯ ಗಿಹಾನ್ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿತ್ತು. ಸಂಪರ್ಕ ಸಭೆಯನ್ನು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಅಧ್ಯಕ್ಷ ಜಿ. ನಂಜನಗೌಡ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಸಂಯುಕ್ತ ಸಹಕಾರಿಯ ನಿರ್ದೇಶಕ ಎಂ.ಆರ್. ಪ್ರಭುದೇವ್ ವಹಿಸಿದ್ದರು. ಜಿಲ್ಲೆಯ ಸೌಹಾರ್ದ ಸಹಕಾರಿಗಳ ಒಕ್ಕೂಟದ ಅಧ್ಯಕ್ಷ ಎಸ್.ಟಿ. ವೀರೇಶ್, ಉಪಾಧ್ಯಕ್ಷ ರುದ್ರೇಗೌಡ್ರು, ಜಿಲ್ಲಾ ಸಿ.ಎ. ಅಸೋಸಿಯೇಷನ್ ಅಧ್ಯಕ್ಷ ಉಮೇಶ್ ಶೆಟ್ಟಿ ಮಾತನಾಡಿದರು. ಸಂಯುಕ್ತ ಸಹಕಾರಿಯ ಬೆಂಗಳೂರು ಪ್ರಾಂತೀಯ ಅಧಿಕಾರಿ ಶ್ರೀಧರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉದ್ಘಾಟನೆಯ ನಂತರ ಸಂಯುಕ್ತ ಸಹಕಾರಿಯ ಅಧ್ಯಕ್ಷ ಜಿ. ನಂಜನಗೌಡ ಮಾತನಾಡಿದರು. ಸಂವಾದದಲ್ಲಿ ಬಂದ ಪ್ರಶ್ನೆಗಳಿಗೆ ಉತ್ತರಿಸಿದರು. ಸಂಯುಕ್ತ ಸಹಕಾರಿಯ ನಿರ್ದೇಶಕ ಎಂ.ಆರ್. ಪ್ರಭುದೇವ್ ಮಾತನಾಡಿದರು. ವಿಷಯಾಧಾರಿತ ತರಬೇತಿಯಲ್ಲಿ ಸಹಕಾರಿಗಳಿಗೆ ಅನ್ವಯಿಸುವ ಆದಾಯ ತೆರಿಗೆ ಮತ್ತು ಜಿ.ಎಸ್.ಟಿ ವಿಷಯದ ಕುರಿತು ಸನ್ನದು ಲೆಕ್ಕ ಪರಿಶೋಧಕ ವರುಣ್ ಭಟ್ ತರಬೇತಿ ನೀಡಿದರು. ಜಿಲ್ಲೆಯ 51 ಸೌಹಾರ್ದ ಸಹಕಾರಿಗಳಿಂದ 138 ಜನರು ಭಾಗವಹಿಸಿದ್ದರು. ರುದ್ರಮ್ಮ ಪ್ರಾರ್ಥಿಸಿದರು. ಸಂಯುಕ್ತ ಸಹಕಾರಿಯ ಸೌಹಾರ್ದ ಅಭಿವೃದ್ಧಿ ಅಧಿಕಾರಿ ಶಶಿಕುಮಾರ್ ಸ್ವಾಗತಿಸಿದರು. ಸಂಯುಕ್ತ ಸಹಕಾರಿಯ ಕಿರಿಯ ಸಹಾಯಕ ಯೋಗೇಶ್ ವೈ.ಎಸ್. ವಂದಿಸಿದರು.