ಹಲ್ಲೆ ನಡೆಸಿ ಸಾವಿಗೆ ಕಾರಣವಾದ ಅಪರಾಧಿಗೆ ಶಿಕ್ಷೆ

Crime_20250604000849554.jpg
Published on

ದಾವಣಗೆರೆ :  ಹಣಕಾಸಿನ ವಿಷಯದಲ್ಲಿ ಜಗಳವಾಡಿ ಸ್ನೇಹಿತನ ಮೇಲೆ ಹಲ್ಲೆ ನಡೆಸಿ ಆತನ ಸಾವಿಗೆ ಕಾರಣವಾದ ಅಪರಾಧಿಗೆ 2 ವರ್ಷ, 6 ತಿಂಗಳು ಕಾರಾಗೃಹ ಶಿಕ್ಷೆ ವಿಧಿಸಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.  ವಿನೋದ ಅಲಿಯಾಸ್ ವಿನೋದ್ ರಾಜ್ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಪ್ರಕರಣದ ಇನ್ನೊಬ್ಬ ಅಪರಾಧಿ ರಾಕಿ ಅಲಿಯಾಸ್ ರಾಕೇಶ್ ವಿಚಾರಣಾ ಹಂತದಲ್ಲಿ ಮೃತಪಟ್ಟಿದ್ದ.  2022ರ ಜ. 25 ರಂದು ವಿನೋದ್ ಹಾಗೂ ರಾಕಿ, ಇಲ್ಲಿನ ಶಿವಾಜಿ ನಗರದ ಮನೆಗೆ ನುಗ್ಗಿ ಸ್ನೇಹಿತ ಪುನೀತ್ ಅವರ ಮೇಲೆ ಹಲ್ಲೆ ನಡೆಸಿದ್ದರಿಂದ ಗಾಯಗೊಂಡು ಪುನೀತ್ ಆಸ್ಪತ್ರೆಗೆ ದಾಖಲಾಗಿದ್ದರು.  ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ಈ ಕುರಿತು ಗಾಂಧಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.  ವಿಚಾರಣೆ ನಡೆಸಿದ ನ್ಯಾಯಾಧೀಶ ಆರ್.ಎನ್. ಪ್ರವೀಣ್ ಕುಮಾರ್ ಸೋಮವಾರ ತೀರ್ಪು ನೀಡಿದರು. ಫಿರ್ಯಾದಿಯ ಪರವಾಗಿ ಸರ್ಕಾರಿ ವಕೀಲ ಕೆ.ಜಿ. ಜಯ್ಯಪ್ಪ ನ್ಯಾಯ ಮಂಡಿಸಿದ್ದರು.    

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net