

ದಾವಣಗೆರೆ : ಯುದ್ಧ ಸಂಭವಿಸಿದರೆ ಸೇನೆಗೆ ಸೇರಿ ಸಹಕರಿಸಲು ಜಿಲ್ಲಾ ಕಾಂಗ್ರೆಸ್‌ನ 5 ಸಾವಿರ ಕಾರ್ಯಕರ್ತರು ಸಿದ್ಧರಿದ್ದಾರೆ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಹೇಳಿದರು. ಜಿಲ್ಲಾ ಸೇವಾ ದಳದ ವತಿಯಿಂದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ, ಡಾ. ಎನ್.ಎಸ್. ಹರ್ಡೆಕರ್ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ ಕಾಂಗ್ರೆಸ್ ಪಕ್ಷ ಉಗ್ರ ಚಟುವಟಿಕೆಗಳನ್ನು ಪ್ರೋತ್ಸಾಹಿಸುವುದಿಲ್ಲ ಎಂದು ತಿಳಿಸಿದರು. ಡಾ. ಎನ್.ಎಸ್. ಹರ್ಡೆಕರ್ ಅವರು ಹಾವೇರಿ ಜಿಲ್ಲೆ ತಿಳುವಳ್ಳಿಯಲ್ಲಿ ಜನಿಸಿ, ರಾಜ್ಯಸಭಾ ಸದಸ್ಯರಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದವರು. ಸೇವಾದಳ ಸಂಘಟನೆಗೆ ಒತ್ತುಕೊಟ್ಟರು ಎಂದು ಹೇಳಿದರು. ಜಿಲ್ಲಾ ಸೇವಾದಳ ಅಧ್ಯಕ್ಷ ಡಿ. ಶಿವಕುಮಾರ್, ಎಲ್.ಬಿ. ಹನುಮಂತಪ್ಪ, ಡೋಲಿ ಚಂದ್ರು, ಎ. ನಾಗರಾಜ್, ಸೋಗಿ ಶಾಂತಕುಮಾರ್, ಪಾಮೇನಹಳ್ಳಿ ನಾಗರಾಜ್, ಉಮಾ ತೋಟಪ್ಪ ಮಾತನಾಡಿದರು. ಬುನಿಯನ್ ಭಾಸ್ಕರ್, ಸಾಕಮ್ಮ, ಇಂದ್ರಮ್ಮ, ವಿನೋದ್, ರವಿಚಂದ್ರ, ಯುವ ಕಾಂಗ್ರೆಸ್ ಅಧ್ಯಕ್ಷ ವರುಣ್ ಬೆಣ್ಣೆಹಳ್ಳಿ, ಎಲ್ಎಂಎಚ್ ಸಾಗರ್, ಕಾವೇರಿ, ತಿಪ್ಪೇಸ್ವಾಮಿ, ಹೆಗ್ಗೇರಿ ರಂಗಪ್ಪ ಇದ್ದರು.