ಬಿಜೆಪಿಯದು ಸಂವಿಧಾನ ವಿರೋಧಿ ನಡೆ

dvg-congres-06.jpg
Published on

ದಾವಣಗೆರೆ : ಕಾಂಗ್ರೆಸ್ ಪಕ್ಷ ಸಂವಿಧಾನದ ಆಶಯದಂತೆ ನಡೆಯುತ್ತಿದ್ದರೆ ಬಿಜೆಪಿ ಅದಕ್ಕೆ ವಿರುದ್ಧವಾದ ನಡೆ ಅನುಸರಿಸುತ್ತಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ. ಶಿವಕುಮಾರ್ ಆರೋಪಿಸಿದರು.
 ಜಿಲ್ಲಾ ಕಾಂಗ್ರೆಸ್ ವತಿಯಿಂದ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 67ನೇ ಮಹಾ ಪರಿನಿರ್ವಾಣ ದಿನಾಚರಣೆಯಲ್ಲಿ ಮಾತನಾಡಿದರು.
 ಅಂಬೇಡ್ಕರ್ ರಚಿಸಿದ ಸಂವಿಧಾನದಿಂದ ಇಂದು ನಾವೆಲ್ಲರೂ ಜೀವಿಸುವಂತಾಗಿದೆ ಎಂದು ತಿಳಿಸಿದರು.
 ಪಕ್ಷದ ವಕೀಲರ ಪರಿಷತ್ ವಿಭಾಗದ ಅಧ್ಯಕ್ಷ ಪ್ರಕಾಶ್ ಪಾಟೀಲ್ ಮಾತನಾಡಿ ಅಂಬೇಡ್ಕರ್ ರಚಿಸಿದ ಸಂವಿಧಾನ ಇಡೀ ವಿಶ್ವಕ್ಕೆ ಮಾದರಿಯಾಗಿದ್ದು, ಸಂವಿಧಾನ ತತ್ವದಡಿ ನಾವೆಲ್ಲರೂ ಜೀವನ ರೂಪಿಸಿಕೊಂಡಾಂಗ ಅವರಿಗೆ ಗೌರವ ಸೂಚಿಸಿದಂತಾಗುತ್ತದೆ ಎಂದರು.
 ಜಿಲ್ಲಾ ಪ್ರಧಾನ ಕಾರ‌್ಯದರ್ಶಿ ಎಸ್. ಮಲ್ಲಿಕಾರ್ಜುನ್ ಮಾತನಾಡಿ, ಅಂಬೇಡ್ಕರ್ ಅವರ ಜೀವನದಲ್ಲಿ ನಡೆದ ಪ್ರಮುಖ ಘಟನೆಗಳನ್ನು ವಿವರಿಸಿದರು. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಪಕ್ಷದ ಮುಖಂಡರು ಮತ್ತು ಕಾರ‌್ಯಕರ್ತರು ಸ್ಮರಿಸಿದರು.
 ಕಾಂಗ್ರೆಸ್ ಮುಖಂಡರಾದ ಎಲ್.ಎಂ.ಎಚ್. ಸಾಗರ್, ಜಿ. ರಾಕೇಶ್, ಮಹಮದ್ ಜಿಕ್ರಿಯಾ, ಸುರೇಶ್ ಜಾಧವ್, ಶ್ರೀನಿವಾಸ ಕಲ್ಪತರು, ಹಾಲೇಶ್, ಎಸ್.ರವಿಕುಮಾರ್, ಕೆ.ಎಚ್. ಚೈತನ್ಯಕುಮಾರ್, ಎಚ್. ನಾಗರಾಜ್, ಮಂಗಳಮ್ಮ, ಉಮಾ ತೋಟಪ್ಪ, ಕೆ. ಕಾವ್ಯಾ, ಸಲ್ಮಾಬಾನು, ದಾಕ್ಷಾಯಿಣಮ್ಮ, ರಾಜೇಶ್ವರಿ, ದೀಪಾ, ವಸಂತಮ್ಮ, ವಕೀಲರಾದ ಪ್ರೇಮಾ, ಕವಿತಾ ಚಂದ್ರಶೇಖರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net