ಪಿಯು ಶಿಕ್ಷಣ ರಾಜ್ಯ ಸಮಾವೇಶದಲ್ಲಿ ಸಂಘಟನೆಯ ಮಂತ್ರ

dvg-pu-samavesha.jpg
Published on

ದಾವಣಗೆರೆ : ಕರ್ನಾಟಕ ಅನುದಾನರಹಿತ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘ(ಕುಪ್ಮಾ) ವತಿಯಿಂದ ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಆಯೋಜಿಸಿದ್ದ, ರಾಜ್ಯಮಟ್ಟದ ಪದವಿಪೂರ್ವ ಶಿಕ್ಷಣದ ಎರಡು ದಿನಗಳ ಸಮಾವೇಶದಲ್ಲಿ ಸಂಘಟನೆಯನ್ನು ಶಕ್ತಿಯುತಗೊಳಿಸುವ ಸಂಕಲ್ಪ ಮಾಡಲಾಯಿತು.  ರಾಜ್ಯದಲ್ಲಿ 3 ಸಾವಿರಕ್ಕೂ ಅಧಿಕ ಖಾಸಗಿ ಅನುದಾನ ರಹಿತ ಪಿಯು ಕಾಲೇಜುಗಳಿವೆ. ಹೆಚ್ಚು ಸಂಸ್ಥೆಗಳನ್ನು ಸಂಘದ ವ್ಯಾಪ್ತಿಗೆ ತಂದು ಸದಸ್ಯತ್ವ ಹೆಚ್ಚಿಸುವ ಸಂದೇಶವನ್ನು ಸಮಾವೇಶದಲ್ಲಿ ರವಾನಿಸಲಾಯಿತು.  ಕುಪ್ಮಾ ಸಂಘಟನೆಯನ್ನು ಗಟ್ಟಿಗೊಳಿಸುವುದು ಹೇಗೆ, ಖಾಸಗಿ ಅನುದಾನ ರಹಿತ ಪಿಯು ಕಾಲೇಜುಗಳ ನಿರ್ವಹಣೆಯ ಸವಾಲುಗಳ ಕುರಿತು ಗೋಷ್ಠಿಗಳಲ್ಲಿ ಚಿಂತನ ಮಂಥನ ನಡೆಸಲಾಯಿತು.  ಪಿಯು ಶಿಕ್ಷಣ ಬೋಧನೆಯ ಗುಣಮಟ್ಟವನ್ನು ಹೆಚ್ಚಿಸಲು ಆದ್ಯತೆ ನೀಡುವುದು. ಪಿಯು ಶಿಕ್ಷಣ ಮತ್ತು ಸಂಸ್ಥೆಗಳ ನಿರ್ವಹಣೆಯಲ್ಲಿ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ಪಾತ್ರದ ಕುರಿತು ಚರ್ಚಿಸಲಾಯಿತು.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net