ಉಪನ್ಯಾಸಕರು ಸಂಶೋಧನೆಗೆ ನೀಡಲಿ ಆದ್ಯತೆ

IMG-20240804-WA0148.jpg
Published on

ದಾವಣಗೆರೆ : ಇಂಜಿನಿಯರಿಂಗ್ ಶಿಕ್ಷಣ ಕ್ಷೇತ್ರದಲ್ಲಿ ಉಪನ್ಯಾಸಕರು ಸಂಶೋಧನೆಗೆ ಆದ್ಯತೆ ನೀಡಬೇಕು ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಸಚಿವ ಡಾ.ಬಿ.ಇ. ರಂಗಸ್ವಾಮಿ ಹೇಳಿದರು.  ವಿಟಿಯು ಸಹಯೋಗದಲ್ಲಿ ನಗರದ ಜೈನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಇತ್ತೀಚೆಗೆ ನಡೆದ ‘ದಿ ಇಂಪ್ಯಾಕ್ಟ್ ಆಫ್ ರಿಸರ್ಚ್ ಆ್ಯಂಡ್ ಡೆವಲಪ್‌ಮೆಂಟ್ ಆನ್ ಎಜುಕೇಶನ್ ಸಿಸ್ಟಮ್’ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.  ವಿ.ಟಿ.ಯು, ಎ.ಐ.ಸಿ.ಟಿ.ಇ, ಮುಂತಾದ ಸಂಸ್ಥೆಗಳಿಂದ ಸಂಶೋಧನಾ ನಿಧಿ ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳ ಸಹಯೋಗ ಪಡೆಯುವಂತೆ ತಿಳಿಸಿದರು.  ಸಂಸ್ಥೆಯ ಸಲಹೆಗಾರ ಡಾ.ಮಂಜಪ್ಪ ಸಾರಥಿ ಮಾತನಾಡಿ, ಉನ್ನತ ಶಿಕ್ಷಣದಲ್ಲಿ ಹೂಸ ಶಿಕ್ಷಣ ನೀತಿಯ ಕಾರ್ಯ ವಿಧಾನದ ಬಗ್ಗೆ ತಿಳಿಸಿದರು. ಕಾಲೇಜಿನ ಪ್ರಾಚಾರ್ಯ ಡಾ. ಡಿ.ಬಿ. ಗಣೇಶ್ ಮಾತನಾಡಿ ಬೋಧಕ ಸಿಬ್ಬಂದಿ ಸಂಶೋಧನೆಯಲ್ಲಿ ತೊಡಗಬೇಕು ಎಂದರು.  ವಿಟಿಯುನ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕ ಡಾ.ಕೆ.ಜಿ. ಬಸವಕುಮಾರ್ ಮತ್ತು ಜೆ.ಐ.ಟಿ ದಾವಣಗೆರೆಯ ಡಾ. ಸಂತೋಷ್ ಎಂ. ನೇಜಕಾರ್, ಕಾರ್ಯಕ್ರಮದ ಸಂಚಾಲಕರಾಗಿದ್ದರು. ಸಂಯೋಜಕರಾದ ಡಾ.ಎಚ್.ಬಿ. ಮರುಳಸಿದ್ದಪ್ಪ, ಡಾ.ಪಿ.ಎಸ್. ಪ್ರೀತಾ, ಕೆಮಿಸ್ಟ್ರಿ ವಿಭಾಗದ ಪ್ರೊಫೆಸರ್ ಡಾ. ನಾಗಸ್ವರೂಪ್, ವಿವಿಧ ವಿಭಾಗದ ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ವರ್ಗದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net